HomePage_Banner_
HomePage_Banner_
HomePage_Banner_

ಡೆಂಜೋಳಿ ಪೇರಡ್ಕ ಶ್ರೀ ಸದಾಶಿವ ದೇವಸ್ಥಾನದ ವರ್ಷಾವಧಿ ಜಾತ್ರೆ

ಗರ್ಡಾಡಿ : ಪೇರಡ್ಕ ಶ್ರೀ ಸದಾಶಿವ ದೇವಸ್ಥಾನ ಡೆಂಜೋಳಿ ಶ್ರೀ ಸದಾಶಿವ ದೇವರ ವರ್ಷಾವಧಿ ಜಾತ್ರಾ ಮಹೋತ್ಸವ ಜ.18  ರಿಂದ ಜ 22 ರವರೆಗೆ ತಂತ್ರಿಗಳಾದ ನಡ್ಡಂತಾಡಿ ಬ್ರಹ್ಮಶ್ರೀ ಬಾಲಕೃಷ್ಣ ಪಾಲಗಣ್ಣಾಯರ ನೇತೃತ್ವದಲ್ಲಿ ಧಾರ್ಮಿಕ- ವಿಧಿ ವಿಧಾನಗಳೊಂದಿಗೆ ನಡೆಯಿತು ಜ.18ರಂದು ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡಿತು.
ರಾತ್ರಿ ರಂಗಪೂಜೆ ಉತ್ಸವ, ಪ್ರತಿದಿನ ಬಲಿ ಉತ್ಸವ, ನಿತ್ಯಬಲಿ ನಡೆಯಿತು. ಜ.20 ರಂದು ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಗರ್ಡಾಡಿ ವಿಭಾಗದ ಸಹಕಾರದೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಪೂಜೆ ಜರುಗಿತು.
ಜ.21 ರಂದು ಕವಾಟೋದ್ಘಾಟನೆ ದೇವರ ದಿವ್ಯ ದರ್ಶನ ಬಲಿ ಉತ್ಸವ, ರಾತ್ರಿ ದೈವಗಳಿಗೆ ಗಗ್ಗರ ಸೇವೆ ನಡೆಯಿತು. ಉತ್ಸವ ಸಮಿತಿ ಅಧ್ಯಕ್ಷ ಜಿ.ಜಯರಾಮ ಗೌಡ ಗರ್ಡಾಡಿ ಗುತ್ತು, ಆಡಳಿತ ಮೊಕ್ತೇಸರರು ಹಾಗೂ ಪ್ರಧಾನ ಅರ್ಚಕ ಡಿ. ಉದಯ ಮಂಜಿತ್ತಾಯ, ಭಜನಾ ಮಂಡಳಿ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ, ಹಂಗಾರ್ಜಾಲು ಸಮಿತಿ ಸದಸ್ಯರುಗಳು ಊರ ಭಕ್ತಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.