HomePage_Banner_
HomePage_Banner_
HomePage_Banner_

ಜ 26 ಮತ್ತು 27 ರಂದು ಕಿರಿಯಾಡಿ ಪ್ರತಿಷ್ಠಾ ದಿನಾಚರಣೆ ಮತ್ತು ಜಾತ್ರೋತ್ಸವ

ಉಜಿರೆ : ಶ್ರೀ ಸದಾಶಿವ ದೇವಸ್ಥಾನದ ಕಿರಿಯಾಡಿ ಶ್ರೀ ಸದಾಶಿವ ದೇವರ ಪ್ರತಿಷ್ಠಾ ದಿನಾಚರಣೆ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ನೀಲೇಶ್ವರ ಆಲಂಬಾಡಿ ವಾಸುದೇವ ತಂತ್ರಿಗಳ ನಿರ್ದೇಶನದಂತೆ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜ. 26 ಮತ್ತು 27 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಜ.26ರಂದು ಬೆಳಿಗೆ 1008 ನಾರಿಕೇಳ ಗಕಾರ ಗಣಪತಿ ಹೋಮ, ಪ್ರಾರ್ಥನೆ, ತೋರಣ ಮುಹೂರ್ತ, ಕಲಶ ಪೂಜೆ, ಕಲಶಾಭಿಷೇಕ, ಶತರುದ್ರಾಭಿಷೇಕ ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ಸಂಜೆ ಸ್ಥಳೀಯರಿಂದ ಸಾಂಸ್ಕ್ರತಿಕ ವೈವಿಧ್ಯಮಯ ಕಾರ್ಯಕ್ರಮ, ರಾತ್ರಿ ದೇವರ ಬಲಿ ಹೊರಟು ಭೂತಬಲಿ ಉತ್ಸವ, ಕಟ್ಟೆಪೂಜೆ, ವಸಂತ ಕಟ್ಟೆ ಪೂಜೆ, ರಾತ್ರಿ ಕಲಾಕುಂಚ ಕಲಾವಿದರು ಮುಂಡಾಜೆ ಇವರಿಂದ ಜನಪದ ವೈಭವ ಕಾರ್ಯಕ್ರಮ
ಜ. 27 ರಂದು ಬೆಳಿಗ್ಗೆ ಗಣಪತಿ ಹೋಮ, ದೇವರ ಬಲಿ ಹೊರಟು ಉತ್ಸವ ದರ್ಶನ ಬಲಿ, ಬಟ್ಟಲು ಕಾಣಿಕೆ, ಸಂಜೆ ಕಲ್ಲುರ್ಟಿ ಕಲ್ಕುಡ ದೈವಸ್ಥಾನದಿಂದ ಮೆರವಣಿಗೆಯೊಂದಿಗೆ ಭಂಡಾರ ತರುವುದು. ಬಳಿಕ ಭಜನೆ. ರಾತ್ರಿ ರಂಗಪೂಜೆ ಪ್ರಸಾದ ವಿತರಣೆ ಆ ನಂತರ ದೈವಗಳ ನೇಮೋತ್ಸವ ನಡೆಯಲಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.