ಸಾವಯವ ಗೊಬ್ಬರ ಕುರಿತ ಡ್ಯಾಕ್ಯುಮೆಂಟರಿ ‘ಗೋಲ್ಡ್‌ ಆಫ್‌ ಲಾೖಲ’ ಇಂಟರ್‌ನ್ಯಾಶ‌ನಲ್‌ ಫೆಸ್ಟ್‌ಗೆ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಘನ ತ್ಯಾಜ್ಯ ವಿಲೇವಾರಿಯಿಂದ ತಯಾರಿಸಿದ ಸಾವಯವ ಗೊಬ್ಬರ  ಘಟಕ

ಲಾೖಲ:   ಲಾೖಲ ಗ್ರಾ.ಪಂ.ನ ಘನ ತ್ಯಾಜ್ಯ ವಿಲೇವಾರಿಯಿಂದ ತಯಾರಿಸಿದ ಸಾವಯವ ಗೊಬ್ಬರದ ಕುರಿತು ಮೈಸೂರು ಮೂಲದ ವ್ಯಕ್ತಿಯೊಬ್ಬ ಗ್ರಾ.ಪಂ.ಗೆ ಭೇಟಿ ನೀಡಿ ಸಿದ್ಧಪಡಿಸಿದ ಡ್ಯಾಕ್ಯುಮೆಂಟರಿ ಚಿತ್ರವೊಂದು ಜ. 21ರಿಂದ 23ರ ವರೆಗೆ ಚೆನ್ನೈನ ಅಣ್ಣಾ ವಿವಿಯಲ್ಲಿ ನಡೆಯುವ ಪ್ರಕೃತಿ ಇಂಟರ್‌ನ್ಯಾಶನಲ್‌ ಡ್ಯಾಕ್ಯುಮೆಂಟರಿ ಫಿಲ್ಮ್ ಫೆಸ್ಟ್‌ಗೆ ಆಯ್ಕೆಯಾಗಿದೆ.

ಗ್ರಾಮಸ್ಥರ ಸೇವೆಗಾಗಿ ಭಾರತ ಸರಕಾರದಿಂದ ಐಎಸ್‌ಒ ಮಾನ್ಯತೆ ಪಡೆದ ರಾಜ್ಯದ ಪ್ರಥಮ ಗ್ರಾ.ಪಂ. ಎಂಬ ಸುದ್ದಿಯನ್ನು ಪತ್ರಿಕೆಯಲ್ಲಿ ಗಮನಿಸಿದ ಮೈಸೂರಿನ ಡ್ಯಾಕ್ಯುವೆಂಟರಿ ಚಿತ್ರ ನಿರ್ಮಿಸುವ ಕೆ. ಗೋಪಿನಾಥ್‌ ಅವರು ಆಸಕ್ತಿಯಿಂದ ಗ್ರಾ.ಪಂ.ಗೆ ಭೇಟಿ ನೀಡಿ, ಅಲ್ಲಿ ಗೊಬ್ಬರ ತಯಾರಿ ಘಟಕವನ್ನು ವೀಕ್ಷಿಸಿದ್ದರು. ಒಟ್ಟು 2 ಬಾರಿ ಗ್ರಾ.ಪಂ.ಗೆ ಭೇಟಿ ನೀಡಿ ಚಿತ್ರೀಕರಣ ನಡೆಸಿ, ಡಾಕ್ಯುಮೆಂಟರಿ ಸಿದ್ಧಪಡಿಸಿದ್ದರು.

ಲಾೖಲ ಗ್ರಾ.ಪಂ. ತ್ಯಾಜ್ಯವನ್ನು ಲಾೖಲ ಗೋಲ್ಡ್‌ ಹೆಸರಿನಲ್ಲಿ ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಿದ್ದು, ಹೀಗಾಗಿ ಇವರು ತಮ್ಮ ಡಾಕ್ಯುಮೆಂಟರಿಗೆ ಗೋಲ್ಡ್‌ ಆಫ್‌ ಲಾೖಲ ಎಂಬ ಹೆಸರನ್ನಿಟ್ಟಿದ್ದಾರೆ. ಚಿತ್ರಕ್ಕೆ ಪ್ರೊ| ನಿರಂಜನ ವಾನಳ್ಳಿ ಅವರು ಕಥೆ ಬರೆದಿದ್ದು, ಕೀರ್ತಿಕುಮಾರ್‌ ಅವರು ಕೆಮರಾ ನಿರ್ವಹಿಸಿದ್ದಾರೆ. ಉಳಿದ ಎಲ್ಲ ಕೆಲಸಗಳನ್ನೂ ಗೋಪಿನಾಥ್‌ ಅವರೇ ನಿರ್ವಹಿಸಿದ್ದು, 10-35 ನಿಮಿಷಗಳಲ್ಲಿ ಗೋಲ್ಡ್‌ ಆಫ್‌ ಲಾೖಲ ಇಂಗ್ಲಿಷ್‌ನಲ್ಲಿ ಸಿದ್ಧಗೊಂಡಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.