ಮೇಲಂತಬೆಟ್ಟು ಭಗವತಿ ದೇವಸ್ಥಾನದಲ್ಲಿ ಸರ್ವೇಶ್ವರೀ ಪೂಜೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮೇಲಂತಬೆಟ್ಟು: ಮೇಲಂತಬೆಟ್ಟುವಿನ ಪುಣ್ಯ ಭೂಮಿಯಲ್ಲಿ ಶ್ರೀ ದೇವಿ ಭಗವತಿ ಅಮ್ಮನವರು ನೆಲೆಯಾಗಿ 18 ವರ್ಷ ಸಂದ ಪ್ರಯುಕ್ತ ಜ.14 ಸಂಕ್ರಾಂತಿಯಂದು ಶ್ರೀ ಸರ್ವೇಶ್ವರೀ ದೇವಿಯ ಪೂಜೆ, ರಂಗಪೂಜೆ, ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ ಹಾಗೂ ಸಂಕ್ರಾಂತಿ ಪೂಜೆ, ಹೂವಿನ ಪೂಜೆ ವಿಜೃಂಭಣೆಯಿಂದ ನಡೆಯಿತು.
ಸಂಜೆ ಗಂಟೆ ೫ರಿಂದ ಶ್ರೀ ದೇವಿ ಭಗವತಿ ಅಮ್ಮ ಭಜನಾ ಮಂಡಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮೇಲಂತಬೆಟ್ಟು ಇವರಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಶ್ರೀ ಸರ್ವೇಶ್ವರೀ ದೇವಿಯ ಪೂಜೆ ನಡೆಯಿತು. ಜೀವನದಲ್ಲಿ ಕಷ್ಟ-ನಷ್ಟ, ಆತಂಕಗಳು, ಉದ್ಯೋಗದಲ್ಲಿ ನಷ್ಟ ಹಾಗೂ ಸಂಸಾರದಲ್ಲಿ ಕೆಲವೊಂದು ರೀತಿಯ ತೊಂದರೆಗಳು, ವಿವಾಹ ತೊಂದರೆಗಳು, ಮನಃಕ್ಲೇಶ, ಧನವ್ಯಯ ಮೊದಲಾದವುಗಳಿಗೆ ನಾವು ಸರ್ವೇಶ್ವರಿಯ ಪೂಜೆ ಮಾಡುವುದರಿಂದ ದೇವಿ ಪ್ರಸನ್ನತೆ ಹೊಂದಿ ಉತ್ತಮ ಫಲಗಳು ಲಭಿಸುತ್ತದೆ ಎಂದು ಪೂಜೆಯನ್ನು ನೆರವೇರಿಸಿದ ಚಂದ್ರಯ್ಯ ಪುರೋಹಿತರು ತಿಳಿಸಿದರು.ಪೂಜೆಯಲ್ಲಿ ೩೫ ಮಂದಿ ಮಹಿಳೆಯರು ಭಾಗವಹಿಸಿದ್ದರು.
ರಾತ್ರಿ ೮.೩೦ಕ್ಕೆ ಮಕರ ಸಂಕ್ರಾಂತಿಯ ಪ್ರಯುಕ್ತ ಶ್ರೀ ದೇವಿಗೆ ರಂಗಪೂಜೆ, ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ, ಸಂಕ್ರಾಂತಿ ಪೂಜೆ, ಭಕ್ತಾಧಿಗಳಿಂದ ವಿಶೇಷ ಸೇವಾ ಕಾರ್ಯಗಳು ನಡೆಯಿತು. ಅರ್ಚಕರಾದ ಪ್ರಭಾಕರ ಶಾಂತಿ ಹಾಗೂ ಯಶವಂತ ಶಾಂತಿ ಪೂಜಾ ಕಾರ್ಯವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಊರಿನ ಹಾಗೂ ಪರವೂರುಗಳ ಭಕ್ತರು, ಊರಿನ ನಾಗರಿಕರು, ಸಂಘ-ಸಂಸ್ಥೆಯವರು, ಸರಕಾರಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ, ಪೂಜಾ ಸಮಿತಿ, ಭಜನಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.