ಅಳದಂಗಡಿಯಲ್ಲಿ ಬೆಳ್ತಂಗಡಿ ತಾಲೂಕು 16 ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಬೆಳ್ತಂಗಡಿ ತಾ|16 ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಯನ್ನು ಪ್ರೊ. ಪಿ ತುಕರಾಮ ಪೂಜಾರಿ  ನೆರವೇರಿಸಿದರು
ಸಮ್ಮೇಳನದ ಸವಿನೆನಪಿಗಾಗಿ ಮುದ್ರಿಸಿದ “ಚಾರುಮುಡಿ” ಸ್ಮರಣ ಸಂಚಿಕೆ ಬಿಡುಗಡೆ

ಅಳದಂಗಡಿ: ನಮಗೆ ಅನ್ನ ನೀಡಿದ, ಪ್ರಪಂಚದ ಪರಿಚಯ ಮಾಡಿದ, ಬದುಕು ಹೇಗೆ ಎಂದು ತಿಳಿಸಿಕೊಟ್ಟ ಕನ್ನಡ ಭಾಷೆ ಹೆತ್ತ ತಾಯಿಗೆ ಸಮಾನ. ಅತ್ಯಂತ ಪುರಾತನ ಮತ್ತು ಶಾಸ್ತ್ರೀಯವಾಗಿರುವ ಈ ಭಾಷೆಯ ಉಳಿವಿನ ಬಗ್ಗೆ ರಾಜಕೀಯ ವ್ಯವಸ್ಥೆಯಿಂದ ಪರಿಹಾರವಾಗಲಿದೆ ಎಂಬ ನಿರೀಕ್ಷೆ ಬೇಡ. ಇಂಗ್ಲೀಷ್ ಕಲಿತರೆ ಮಾತ್ರ ಭವಿಷ್ಯ ಎನ್ನುವ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಮೂಡಿದ್ದು, ನಮಗೆ ಯೋಗ್ಯತೆ ಮತ್ತು ಸಾಮರ್ಥ್ಯವಿದ್ದರೆ ಯಶಸ್ಸು ಸಾಧಿಸಲು ಭಾಷೆ ತೊಡಕಾಗದು ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಪ್ರೊ. ಪಿ ತುಕರಾಮ ಪೂಜಾರಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ದ.ಕ ಜಿಲ್ಲೆ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಸಾಹಿತ್ಯ ಸಮ್ಮೇಳನ ಸಂಯೋಜನಾ ಸಮಿತಿ ಸಹಯೋಗದೊಂದಿಗೆ ಜ. 16 ರಂದು ಅಳದಂಗಡಿ ಶ್ರೀ ಸೋಮಾನಾಥೇಶ್ವರೀ ದೇವಸ್ಥಾನ ಬಳಿಯ ಅರುವ ನಾರಾಯಣ ಶೆಟ್ಟಿ ಸಭಾಂಗಣ, ಪಾಂಡ್ಯಪ್ಪ ಅರಸ ಕೃಷ್ಣರಾಜ ಅಜಿಲ ವೇದಿಕೆಯಲ್ಲಿ ನಡೆದ ಬೆಳ್ತಂಗಡಿ ತಾ|16 ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಕೈಂಕರ್ಯಕ್ಕಾಗಿ ಚುರುಕುಮುಟ್ಟಿಸುವ ಉದ್ಧೇಶ:
ಸಮ್ಮೇಳನಗಳಿಂದ ಕನ್ನಡ ಜಾಗೃತಿಯಾಗುತ್ತದೆಯೇ ಎಂಬ ಪ್ರಶ್ನೆ ಕೆಲವರ ಮನದಲ್ಲಿ ಮೂಡಬಹುದು. ಅದು ಒಂದರ್ಥದಲ್ಲಿ ನಿಜವೂ ಕೂಡ. ಸಮ್ಮೇಳನದ ಒಂದು ದಿನದ ಕಾರ್ಯಕ್ರಮದಿಂದ ಕನ್ನಡ ಉಳಿವಿನ ಕೈಂಕರ್ಯದ ಬಗ್ಗೆ ಕನ್ನಡಾಭಿಮಾನಿಗಳಲ್ಲಿ ಚುರುಕು ಮುಟ್ಟುವುದಂತೂ ಸತ್ಯ. ಅದಕ್ಕಾಗಿ ಇದನ್ನು ನಿರಂತರ ಮಾಡುತ್ತಾ ಬರಲಾಗುತ್ತಿದೆ. ಮೊದಲು ನಮ್ಮ ಮನೋಭಾವನೆ ಬದಲಾಗಬೇಕು. ಕನ್ನಡದ ತುಡಿತ ನಮ್ಮ ಮನದಲ್ಲಿ ಮೂಡಬೇಕು ಎಂದರು.
ನಿಟಕಪೂರ್ವ ಸಮ್ಮೇಳನಾಧ್ಯಕ್ಷ ಬಾಬು ಶೆಟ್ಟಿ ನಾರಾವಿ ಮಾತನಾಡಿ, ಕಳೆದ ಇಷ್ಟೂ ವರ್ಷಗಳಿಂದ ಕನ್ನಡದ ಸೇವೆಯಲ್ಲಿ ನಿರಂತರತೆ ಕಾಯ್ದುಕೊಂಡು ಬಂದಿರುವ ತಾ| ಕನ್ನಡ ಸಾಹಿತ್ಯ ಪರಿಷತ್ತು ಮೆಚ್ಚುಗೆಗೆ ಅರ್ಹವಾಗಿದೆ. ಅಧ್ಯಕ್ಷ ಡಾ. ಬಿ ಯಶೋವರ್ಮ ನೇತೃತ್ವದ ಅವರ ತಂಡ ಈ ವರ್ಷ ಕೂಡ ತಾಲೂಕಿನಾಧ್ಯಕ್ಷ ಶಾಲಾ ಕಾಲೇಜುಗಳಲ್ಲಿ ಹಳೆಗನ್ನಡದ ಬಗ್ಗೆ ಗಾಯನ ವ್ಯಾಖ್ಯಾನದಂತಹಾ ಕಾರ್ಯಕ್ರಮ ಹಮ್ಮಿಕೊಂಡು ವಿಶೇಷ ಜಾಗೃತಿ ಮೂಡಿಸಿದೆ ಎಂದರು.
ಚಾರುಮುಡಿ ಸಂಚಿಕೆ ಬಿಡುಗಡೆ:
ಸಮ್ಮೇಳನದ ಸವಿನೆನಪಿಗಾಗಿ ಮುದ್ರಿಸಿದ “ಚಾರುಮುಡಿ” ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ, ಹಿರಿಯರು ಕನ್ನಡದ ಉಳಿವಾಗಿ ಮಾಡಿರುವ ಕಾರ್ಯಗಳನ್ನು ಇಂದಿನ ಪೀಳಿಗೆಗೆ ಮಾರ್ಗದರ್ಶಿಸುವ ಕೆಲಸ ಮಾಡಬೇಕು ಎಂದರು.
ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ಡಾ. ಎಂ.ಪಿ ಶ್ರೀನಾಥ್ ಮತ್ತು ಬಿ ತಮ್ಮಯ್ಯ ಬಂಟ್ವಾಳ, ಪುತ್ತೂರು ತಾಲೂಕು ಕಸಾಪ ಅಧ್ಯಕ್ಷ ಬಿ ಐತಪ್ಪ ನಾಯ್ಕ, ಬಂಟ್ವಾಳ ತಾ| ಅಧ್ಯಕ್ಷ ಕೆ ಮೋಹನ ರಾವ್, ತಾಲೂಕು ಗೌರವ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಮುಂಡಾಜೆ, ಅಳದಂಗಡಿ ಸಾಹಿತ್ಯ ಸಮ್ಮೇಳನ ಸಂಯೋಜನಾ ಸಮಿತಿ ಅಧ್ಯಕ್ಷ ಶಿವಪ್ರಸಾದ ಅಜಿಲ ಉಪಸ್ಥಿತರಿದ್ದರು.
ಸಂಯೋಜನಾ ಸಮಿತಿ ಗೌರವಾಧ್ಯಕ್ಷ, ಅಜಿಲ ಸೀಮೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಸ್ವಾಗತಿಸಿ, ಕನ್ನಡದ ಸೇವೆ ಮಾಡಲು ಅವಕಾಶ ನೀಡಿದ್ದಕ್ಕಾಗಿ ಸಾಹಿತ್ಯ ಪರಿಷತ್ತನ್ನು ಅಭಿನಂದಿಸಿದರು.
ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರೂಪಿಸಿದರು. ಬಡಗಕಾರಂದೂರು ಶಾಲಾ ಮಕ್ಕಳು ನಾಡಗೀತೆ ಪ್ರಸ್ತುತಪಡಿಸಿದರು. ತಾಲೂಕು ಕಸಾಪ ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿ ವಂದನಾರ್ಪಣೆಗೈದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.