HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಆದಿವಾಸಿಗಳ ಪ್ರದೇಶಕ್ಕೆ ಶೀಘ್ರದಲ್ಲೇ ಭೇಟಿ ಭರವಸೆ ಡಿದ ಸಿ.ಎಂ

ಬೆಳ್ತಂಗಡಿ: ಆದಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸಲು ಶೀಘ್ರದಲ್ಲೇ ಆದಿವಾಸಿಗಳು ವಾಸಿಸುವ ಪ್ರದೇಶಗಳಿಗೆ ಭೇಟಿ ಡಲಾಗುವುದು ಎಂದು ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಹೇಳಿದರು.
ಜ. 11 ರಂದು ವಿಧಾನಸೌಧದಲ್ಲಿ ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್ ನ ರಾಷ್ಟ್ರೀಯ ಸಂಚಾಲಕ, ತ್ರಿಪುರ ಸಂಸದ ಜಿತೇಂದ್ರ ಚೌಧರಿ ಅವರ ನೇತೃತ್ವದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅರಣ್ಯ ಹಕ್ಕು ಕಾಯ್ದೆ ಜ್ಯಾರಿಯಾಗಿ 12 ವರ್ಷ ಕಳೆದರೂ ಬಹುತೇಕ ಆದಿವಾಸಿಗಳಿಗೆ ಜಮೀನ ಹಕ್ಕು ಪಡೆಯಲು ಇರುವ ಗೊಂದಲ ವಾರಣೆ, ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಇತರ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಕಾರಾತ್ಮಕವಾಗಿ ಸ್ಪಂದಿಸುವ ಟ್ಟಿನಲ್ಲಿ ಆದಿವಾಸಿಗಳು ವಾಸಿಸುವ ಜಿಲ್ಲೆಗಳಿಗೆ ಭೇಟಿ ಡಲಾಗುವುದು ಎಂದವರು ಹೇಳಿದರು.
ಮೂಲಸೌಕರ್ಯ ಬೇಡಿಕೆಗಳ ಮನವಿ ಸಲ್ಲಿಕೆ:
ಬೆಳ್ತಂಗಡಿ ತಾಲೂಕಿನ ವಿಠಲ್ ಮಲೆಕುಡಿಯ ಪ್ರಕರಣ ವಾಪಸ್, ಸುಂದರ ಮಲೆಕುಡಿಯ ಪ್ರಕರಣದಲ್ಲಿ ಪ.ಜಾತಿ/ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಸೇರ್ಪಡೆ, ಜಮೀನ ಹಕ್ಕುಪತ್ರ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ರಸ್ತೆ, ವಿದ್ಯುತ್ ಸಂಪರ್ಕ, ಬಾಂಜಾರು ಮಲೆಕುಡಿಯ ಕಾಲಗೆ ಪರ್ಯಾಯ ರಸ್ತೆ, ಆಶ್ರಮ ಶಾಲೆಗಳ ಉನ್ನತೀಕರಣ, ಅಧ್ಯಾಪಕ, ಸಿಬ್ಬಂದಿಗಳ ಖಾಯಮಾತಿ, ಉಚಿತ ನರ್ಸಿಂಗ್ ತರಬೇತಿಗೆ ಆಯ್ಕೆಯಾದ ವಿಧ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ, ಆದಿವಾಸಿ ಸಮುದಾಯದ ಕಾಲಗಳಿಗೆ ಸಂಪರ್ಕಿಸುವ ರಸ್ತೆ ಕಾಂಕ್ರೀಟಿಕರಣ, ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉದ್ಯೋಗ ಮೀಸಲಾತಿ, ದಿನಗೂಲಿ ನೌಕರರ ಖಾಯಂ, ಬಾಂಜಾರು ಮಲೆಕುಡಿಯ ಕಾಲಯ ಜಮೀನ ಸಮಸ್ಯೆ, ಮೂಲಭೂತ ಸೌಕರ್ಯಗಳ ಡುವಲ್ಲಿ ರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಸೇರಿದಂತೆ ೨೭ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತ್ರಿಪುರ ಸಂಸದ ಜಿತೇಂದ್ರ ಚೌಧರಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ವೈ.ಕೆ ಗಣೇಶ್, ಸಹ ಸಂಚಾಲಕ ಎಸ್. ವೈ ಗುರುಶಾಂತ್, ಡಾ. ಕೃಷ್ಣಪ್ಪ ಕೊಂಚಾಡಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ವಸಂತ ನಡ, ಪ್ರ. ಕಾರ್ಯದರ್ಶಿ ಜಯಾನಂದ ಪಿಲಿಕಲ, ಸಂಚಾಲಕ ಶೇಖರ್ ಲಾಯಿಲ, ಉಪಾಧ್ಯಕ್ಷ ಸದಾಶಿವ ಧರ್ಮಸ್ಥಳ, ಜತೆ ಕಾರ್ಯದರ್ಶಿ ಲಕ್ಷ್ಮಣ ಆಲಂಗಾಯಿ, ಸುಂದರ ಮಲೆಕುಡಿಯ ಕಾಟಾಜೆ, ಸದಸ್ಯರಾದ ನಾರಾಯಣ ಮಲೆಕುಡಿಯ ಆಲಂಗಾಯಿ, ಯೋಗೀಶ್ ಬಾಂಜಾರು, ಕಿರಣ್ ಬಾಂಜಾರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.