HomePage_Banner_
HomePage_Banner_
HomePage_Banner_

ಉಜಿರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗನ ಶವ ಪತ್ತೆ

Advt_NewsUnder_1

ಉಜಿರೆ: ಉಜಿರೆ ನಿವಾಸಿ ಗುರುನಾಥ ಪ್ರಭು  ಎಂಬವರ ಮನೆಯ ಕಂಪೌಂಡ್ ಬಳಿ  ಕೊಳೆತ ಸ್ಥಿತಿಯಲ್ಲಿ ಮಂಗನ ಶವ ಪತ್ತೆಯಾಗಿದ್ದು, ಇದು ಪರಿಸರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಂಗನ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು , ನಾಲ್ಕು ಐದು ದಿನಗಳ ಹಿಂದೆ ಸತ್ತಿರಬಹುದೆಂದು ಶಂಕಿಸಲಾಗಿದೆ .  ಶವವನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಅಸಾಧ್ಯವಾದ ಸ್ಥಿತಿಯಲ್ಲಿದ್ದ ಕಾರಣ ಅದನ್ನು ಸುಟ್ಟು ಹಾಕಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ಮಂಗ ಸಾವನ್ನಪ್ಪಿದ್ದು ಹೇಗೆ ಎಂದು ತಿಳಿಯಲು ಸಾಧ್ಯವಾಗಿಲ್ಲ. ಮಂಗನ ಶವ ಪ್ರಯೋಗಾಲಯಕ್ಕೂ ಕಳುಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಮಂಗನಕಾಯಿಲೆಯ ಭೀತಿ ಇರುವುದರಿಂದ ಮಂಗನ ಶವ ಸಿಕ್ಕಿರುವ ಭಾಗದಲ್ಲಿ ಕೀಟನಾಶಕ ಸಿಂಪಡಿಸಲಾಗಿದ್ದು, ಸೂಕ್ತ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ ಎಂದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.