ಬೆಂಗಳೂರಿನಲ್ಲಿ ಅಪಘಾತ: ಮರೋಡಿ ಯುವಕ ಸಾವು

ಬೆಳ್ತಂಗಡಿ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜ.7 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಲೂಕಿನ ಮರೋಡಿ ಗ್ರಾಮದ ಅಸತ್ತೆ ನಿವಾಸಿ ಶುಭಕರ ಪೂಜಾರಿ ಅವರ ಪುತ್ರ ಯೋಗೀಶ್(22.ವ) ಮೃತಪಟ್ಟಿದ್ದಾರೆ.
ಮೃತರು ತಂದೆ ಶುಭಕರ ಕೋಟ್ಯಾನ್, ತಾಯಿ ಬೇಬಿ, ಸಹೋದರರಾದ ಸುಕೇಶ್, ವಿಕೇಶ್ ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಇತ್ತೀಚೆಗೆ ಇಂಜಿನಿಯರಿಂಗ್ ಪದವಿ ಮುಗಿಸಿದ್ದ ಯೋಗೀಶ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಎರಡು ವಾರದ ಹಿಂದೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು. ಜ.೭ ರಂದು ನಸುಕಿನ ಜಾವ ಕಂಪೆನಿಗೆ ಹೊರಟಿದ್ದು, ಹೆಬ್ಬಾಳ ಗೇಟ್ ಹತ್ತಿರ ಹೆದ್ದಾರಿ ದಾಟುವಾಗ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಯೋಗೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಸಹೋ ದ್ಯೋಗಿ ಚೇತನ್ ಕುಮಾರ್ ಬಿಡದಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತದೇಹವನ್ನು ಜ.೭ ರಂದು ರಾತ್ರಿ ಮರೋಡಿಯ ಮನೆಗೆ ತಂದು, ಅಂತ್ಯ ಸಂಸ್ಕಾರ ನಡೆಸಲಾಯಿತು. ಮೃತರ ಮನೆಗೆ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಮರೋಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಪಿ.ಕೆ ರಾಜು ಪೂಜಾರಿ, ಸತೀಶ್ ಕಾಶಿಪಟ್ಣ, ನಾರಾವಿ ಚರ್ಚಿನ ಧರ್ಮಗುರುಗಳು ಸೇರಿದಂತೆ ಊರವರು, ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಕಂಪೆನಿಯ ಮುಖ್ಯಸ್ಥರು, ಸಹೋದ್ಯೋಗಿಗಳು, ಕಾಲೇಜಿನ ಗೆಳೆಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.