ಮಾಯಾ ದೇವಸ್ಥಾನ ಜಾತ್ರೋತ್ಸವ ಸಮಾಲೋಚನಾ ಸಭೆ

Advt_NewsUnder_1
Advt_NewsUnder_1

ಬೆಳಾಲು : ಶ್ರೀ ಮಾಯಾ ಮಹದೇವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಫೆ.16ರಿಂದ 20 ರವರೆಗೆ ಜರುಗಲಿದ್ದು, ಇದರ ಪೂರ್ವಭಾವಿ ಊರವರ ಸಮಾಲೋಚನಾ ಸಭೆ ಜ.6ರಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್.ಪದ್ಮಗೌಡರ ಅಧ್ಯಕ್ಷತೆಯಲ್ಲಿ ಜರುಗಿತು. ಅವರು ಮಾತನಾಡುತ್ತಾ ದೇವಸ್ಥಾನದ ಮೂಲಭೂತ ಸೌಕರ್ಯವನ್ನು ದೇವಸ್ಥಾನದಲ್ಲೇ ಮಾಡಲಾಗುತ್ತಿದ್ದು. ದೇವಸ್ಥಾನದ ಎದುರಿನ ಗೋಪುರ ಶಾಶ್ವತವಾಗಿ ನಿರ್ಮಾಣ ಮಾಡುವರೆ ಊರವರ ಸಹಕಾರ ನೀಡಬೇಕು ಎಂದರು.

ಮಾಜಿ ಆಡಳಿತಾಧಿಕಾರಿ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಜಾತ್ರೆಯ ಪೂರ್ವಭಾವಿ ಬಗ್ಗೆ ವಿವರ ನೀಡಿದರು. ಸಭೆಯಲ್ಲಿ ಗೋಪುರ ಕಾಮಗಾರಿ ನಿರ್ಮಾಣಕ್ಕೆ ಸಮಿತಿಯನ್ನು ಹಾಗೂ ಜಾತ್ರೋತ್ಸವಕ್ಕೆ ಉಪಸಮಿತಿಗಳನ್ನು ರಚಿಸಲಾಯಿತು.
ಸಭೆಯಲ್ಲಿ ಮಾಯಾಗುತ್ತು ಪುಷ್ಪದಂತ ಜೈನ್, ಗಣೇಶ್ ಬಾರಿತ್ತಾಯ, ಶಿವಕುಮಾರ್ ಬಾರಿತ್ತಾಯ, ಗ್ರಾ.ಪಂ. ಸದಸ್ಯ ಸುರೇಂದ್ರ ಗೌಡ ಎಸ್, ಭಜನಾ ಮಂಡಳಿಯ ಅಧ್ಯಕ್ಷೆ ವಸಂತಿ ಎಂ.ಕೆ, ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ಕು| ಆಶಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಂಗಾಧರ್ ಸಾಲಿಯಾನ್, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಗಂಗಯ್ಯ ಗೌಡ, ರಾಜಪ್ಪ ಗೌಡ, ನಾಣ್ಯಪ್ಪ ಪೂಜಾರಿ, ದಿನೇಶ್ ಎಂ.ಕೆ, ಸುಕನ್ಯಾ, ಮಾಯಾ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಸದಸ್ಯರುಗಳು, ಊರವರು ಉಪಸ್ಥಿತರಿದ್ದು. ಸಲಹೆ ಸೂಚನೆ ನೀಡಿದರು. ಶೇಖರ ಗೌಡ ಕೊಲ್ಲಿಮಾರು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.