ನಡ ಪ್ರೌಢ ಶಾಲೆಯಲ್ಲಿ ಅಭಿನಂದನೆ, ಸ್ಮಾರ್ಟ್ ಹಿಂದಿ ಕ್ಲಾಸ್ ಉದ್ಘಾಟನೆ, ಬೀಳ್ಕೊಡುಗೆ ಸಮಾರಂಭ

ನಡ ಸನ್ಮಾನ: ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಕೊಯ್ಯೂರು ದಂಪತಿಯನ್ನು ಸನ್ಮಾನಿಸುತ್ತಿರುವುದು

ನಡ: ಶಿಕ್ಷಣದಲ್ಲಿ ನಿರಂತರತೆ ಇದ್ದಾಗ ಮಾತ್ರ ನಾವು ಏನನ್ನಾದರೂ ಸಾಧಿಸಬಹುದಾಗಿದ್ದು, ಯಾವುದೇ ಭಾಷೆಯ ಕುರಿತು ಕೀಳರಿಮೆಯನ್ನು ಬಿಟ್ಟು ಎಲ್ಲಾ ಭಾಷೆಗಳನ್ನು ಕಲಿಯುವ ಪ್ರಯತ್ನ ಪಡಬೇಕು. ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳು ಅಭಿವೃದ್ಧಿಯಾದಾಗಲೇ ದೇಶದ ಪ್ರಗತಿ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಕೆ.ಹರೀಶ್‌ಕುಮಾರ್ ಹೇಳಿದರು.
ಅವರು ಜ.5 ರಂದು ನಡ ಸರಕಾರಿ ಪ್ರೌಢಶಾಲೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಎಸ್. ಅವರಿಗೆ ಅಭಿನಂದನೆ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಏಕನಾಥ್ ಎಚ್.ಗೌಡ ಅವರ ವಿದಾಯ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿದ್ದ ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್.ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದತ್ತ ಹೆಚ್ಚಿನ ಗಮನಹರಿಸಿದಾಗ ಭವಿಷ್ಯ ಉತ್ತಮವಾಗಲಿದೆ ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರನ್ನು ಶಾಲೆಯ ವತಿಯಿಂದ ಅಭಿನಂದಿಸಲಾಯಿತು. ಇಬ್ಬರೂ ಶಿಕ್ಷಕರನ್ನು ಗೌರವಿಸಲಾಯಿತು.
ಜಿ.ಪಂ.ಮಾಜಿ ಸದಸ್ಯ ರಾಜಶೇಖರ್ ಅಜ್ರಿ ಸ್ಮಾರ್ಟ್ ಹಿಂದಿ ಕ್ಲಾಸ್ ಉದ್ಘಾಟಿಸಿದರು. ಅಕ್ಷರ ಕೈತೋಟವನ್ನು ಸಯ್ಯದ್ ಹಬೀಬ್ ಸಾಹೇಬ್ ಉದ್ಘಾಟಿಸಿದರು. ನಡ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಲ. ಧರಣೇಂದ್ರ ಕೆ ಜೈನ್ ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ.ಉಪಾಧ್ಯಕ್ಷೆ ವೇದಾವತಿ, ಎಸ್‌ಡಿಎಂ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ| ಕೇಶವ್ ಟಿ.ಎನ್, ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಜೈನ್ ಸುರ್ಯಗುತ್ತು, ತ್ರಿವಿಕ್ರಮ್ ಸಪಲ್ಯ, ಶಾಲಾ ನಾಯಕಿ ಅಂಕಿತಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ನ್ಯಾಯವಾದಿ ಶಶಿಕಿರಣ್ ಜೈನ್, ಶಿಕ್ಷಕ ರಮೇಶ್ ಮಯ್ಯ, ಪ್ರಾಂಶುಪಾಲ ಚಂದ್ರಶೇಖರ್ ಮೊದಲಾದವರಿದ್ದರು.
ಶ್ರೀನಾಥ್ ಕೆ.ಎಂ.ಅಭಿನಂದನಾ ಪತ್ರ ವಾಚಿಸಿದರು. ಮುಖ್ಯಶಿಕ್ಷಕಿ ಶರ್ಮಿಳಾ ಬಿ. ಪ್ರಸ್ತಾವನೆಗೈದರು. ಅಭಿನಂದನಾ ಸಮಿತಿಯ ಅಧ್ಯಕ್ಷ ಡಾ| ಪ್ರದೀಪ್ ಎ. ಸ್ವಾಗತಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.