ಅಳದಂಗಡಿ: 16ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಬಿಡುಗಡೆ

ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ 16ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಅಳದಂಗಡಿಯಲ್ಲಿ ಜ. 16 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಸಮ್ಮೇಳನ ಸಂಯೋಜನಾ ಸಮಿತಿ ಗೌರವಾಧ್ಯಕ್ಷ ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲ ಅವರು ಜ. 6 ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಿ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಸಮ್ಮೇಳನ ಸಂಯೋಜನಾ ಸಮಿತಿ ಅಧ್ಯಕ್ಷ ಶಿವಪ್ರಸಾದ ಅಜಿಲ, ಪ್ರಧಾನ ಕಾರ್ಯದರ್ಶಿ ಯಶೋಧರ ಸುವರ್ಣ, ತಾಲೂಕು ಘಟಕದ ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್ ಬೆಳಾಲು ಮತ್ತು ಅಶ್ರಫ್ ಆಲಿಕುಂಞ ಮುಂಡಾಜೆ, ಸಮಿತಿ ಕಾರ್ಯದರ್ಶಿಗಳಾದ ನಿರ್ಮಲಾ, ಸಂದೀಪ್ ಎಸ್.ಎನ್., ಉಪಾಧ್ಯಕ್ಷರುಗಳಾದ ಸತೀಶ್ ಕುಮಾರ್ ಮಿತ್ತಮಾರು, ಪಿ.ಕೆ.ಚಂದ್ರಶೇಖರ್, ನಿತ್ಯಾನಂದ ಶೆಟ್ಟಿ ನೊಚ್ಚ, ಗೌರವ ಸಲಹೆಗಾರ ಶ್ರೀವಾಸ ರಾವ್ ದೋರಿಂಜ, ಸೋಮನಾಥ ಮಯ್ಯ, ಆರ್ಥಿಕ ಸಮಿತಿಯ ಡಾ| ಎನ್. ಎಂ. ತುಳುಪುಳೆ, ಸ್ವಯಂಸೇವಾ ಸಮಿತಿಯ ಸದಾನಂದ ಪೂಜಾರಿ ಉಂಗಿಲಬೈಲು, ವೇದಿಕೆ ಮತ್ತು ಸಭಾ ಕಾರ್ಯಕ್ರಮ ಸಮಿತಿಯ ಮೋಹನ ಎ.ದಾಸ್. ಯೋಗಿಶ್ ರಾವ್ ದೋರಿಂಜ, ಸ್ಮರಣ ಸಂಚಿಕೆ ಸಮಿತಿಯ ದೀಪಕ್ ಆಠವಳೆ, ಉದಯ ದೇವಾಡಿಗ, ಸುಬ್ರಹ್ಮಣ್ಯ ಭಟ್ ಬೆಳಾಲು, ಮೆರವಣಿಗೆ ಸಮಿತಿಯ ಜಗದೀಶ್ ಪಿಲ್ಯ, ಪುಸ್ತಕ ಪ್ರದರ್ಶನ ಸಮಿತಿಯ ಸರೋಜಿನಿ , ನೋಂದಣಿ ಸಮಿತಿಯ ರಮೇಶ್ ಚವ್ಹಾಣ್, ಅತಿಥಿ ಸತ್ಕಾರ ಸಮಿತಿಯ ಬೂಬ ಮೂಲ್ಯ, ಸುಪ್ರೀತ್ ಜೈನ್, ಚಂದ್ರಶೇಖರ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಸಮಾಲೋಚನಾ ಸಭೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.