HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಉಜಿರೆ ಎಸ್‌ಡಿಎಂ ಐಟಿ ಕಾಲೇಜಿನಲ್ಲಿ ರಾಷ್ಟ್ರೀಯ ಬೋಧನಾ ಸಿಬಂದಿ ಕೌಶಲಾಭಿವೃದ್ಧಿ ಕಾರ್ಯಾಗಾರ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಭಾರತ ಸರಕಾರದ ಇಲೆಕ್ಟ್ರಾಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಹಯೋಗ ಮತ್ತು ಅನುದಾನದಲ್ಲಿ ವಾರಗಳ ಕಾಲ ನಡೆಯುವ ಬೋಧನಾ ಸಿಬ್ಬಂದಿಯ ಅಭಿವೃದ್ಧಿ (ಎಫ್‌ಡಿಪಿ) ತರಬೇತಿ ಕಾರ್ಯಾಗಾರ ಮತ್ತು ಇಂಟರ್‌ಪ್ರಿನರ್ಷಿಪ್ ಫಾರ್ ಅಕಡಮೀಶಿಯನ್ಸ್ ಕಾರ್ಯಾಗಾರದ ಉದ್ಘಾಟನೆ ಜ. 7  ರಂದು ಉಜಿರೆ ಎಸ್‌ಡಿಎಂ ಐಟಿ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಉದ್ಘಾಟನೆಯನ್ನು ನ್ಯಾಷನಲ್ ಇನ್ಸ್‌ಟ್ಯುಟೂಟ್ ಆಫ್ ಟೆಕ್ನಾಲಜಿ ವಾರಂಗಲ್ ಇಲ್ಲಿನ ಸಂಯೋಜಕ ಡಾ. ಆರ್ ಬಿ.ವಿ ಸುಬ್ರಹ್ಮಣ್ಯಮ್ ನಡೆಸಿದರು. ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್‌ಡಿಎಂ ಇಂಜಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಅಶೋಕ್ ಟಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮುಖ್ಯ ವೇದಿಕೆಯಲ್ಲಿ ಡಾ. ಬಸವ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ ಶ್ವೇತಾ ಎಸ್.ವಿ ಅತಿಥಿಗಳ ಪರಿಚಯ ಮಾಡಿದರು. ಕಾರ್ಯಕ್ರಮ ಸಂಚಾಲಕ ಡಾ.ಧರ್ಮಣ್ಣ ಎಲ್ ವಂದನಾರ್ಪಣೆಗೈದರು. ಈ ಕಾರ್ಯಾಗಾರದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಇತರ ರಾಜ್ಯಗಳಿಂದ ಪ್ರಾಧ್ಯಾಪಕವೃಂದ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸೇರಿ 40 ಮತ್ತು 20 ಹೀಗೆ ಒಟ್ಟು ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.