ವಿಕ ಯುವ ಸಾಧಕ ಪಟ್ಟಿ ಟಾಪ್ 10ರಲ್ಲಿ ಅಶ್ವಥ್ ಹೆಗ್ಡೆ ಬಳಂಜ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: 2018 ರಲ್ಲಿ ಸಮಾಜಕ್ಕೆ ಉಪಯುಕ್ತವಾದ ಕೊಡುಗೆ ನೀಡಿದ 2019 ರಲ್ಲಿ ಭರವಸೆಯಿಡಬಲ್ಲ ಯುವ ಸಾಧಕರನ್ನು ಗುರುತಿಸುವ ವಿಜಯ ಕರ್ನಾಟಕದ ಯುವ ಹವಾ ಪ್ರಯತ್ನದಲ್ಲಿ ಯುವ ಪ್ರತಿಭೆಗಳನ್ನು ಒದುಗರ ಮುಂದಿಟ್ಟು ಇವರಲ್ಲಿ 10 ಮಂದಿಯನ್ನು ಆರಿಸುವ ಅವಕಾಶ ಒದುಗರಿಗೆ ನೀಡಲಾಗಿತ್ತು. ಸಾವಿರಾರು ಒದುಗರ ವೋಟ್ ಆರಂಭಿಸಿ ಹತ್ತು ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈ.ಲಿ.ನ ಸ್ಥಾಪಕ ಅಶ್ವಥ್ ಹೆಗ್ಡೆ ಬಳಂಜರವರು ಆಯ್ಕೆಯಾಗಿದ್ದಾರೆ.
ಪರಿಸರ ಸ್ನೇಹಿ ಎನ್ವಿಗ್ರೀನ್ ಉತ್ಪನ್ನಗಳ ಮೂಲಕ ಮನೆ ಮಾತಾಗಿರುವ ಆಶ್ವಥ್ ಹೆಗ್ಡೆಯವರು ಪ್ಲಾಸ್ಟಿಕ್ ಬ್ಯಾಗ್‌ಗೆ ಪರ್ಯಾಯವಾಗಿ ಮಣ್ಣಿನಲ್ಲಿ ಕರಗುವ ಪರಿಸರ ಸ್ನೇಹಿ ಕೈಚೀಲ ಅವಿಷ್ಕರಿಸಿದರು. ದೇಶ-ವಿದೇಶವನ್ನು ಸುತ್ತಿ ಸಂಶೋಧನೆ ನಡೆಸಿ ಅವಿಷ್ಕರಿಸಿದ ಈ ಕೈ ಚೀಲ ಇಂದು 13 ರಾಷ್ಟ್ರಗಳಲ್ಲಿ ಬಳಕೆಯಲ್ಲಿದೆ. ಚೀನಾ, ಸಿಂಗಾಪುರ, ಜರ್ಮಾನಿ, ಇಟಲಿ, ದುಬೈಯಂತಹ ರಾಷ್ಟ್ರಗಳಲ್ಲಿ ಕೈಚೀಲ ತಯಾರಿಕಾ ಕಂಪೆನಿಗಳಿಗೆ ಅಶ್ವಥ್ ಭೇಟಿ ನೀಡಿ ತಮ್ಮದೇ ಆದ ಹೊಸ ತಂತ್ರಜ್ಞಾನದಲ್ಲಿ ಪರಿಸರ ಸ್ನೇಹಿ ಕೈಚೀಲ ತಯಾರಿಕೆ ಸಾಹಸಕ್ಕೆ ಇಳಿದರು. ಬೆಂಗಳೂರಿನಲ್ಲಿ ಸಂಸ್ಥೆ ಆರಂಭಿಸಿದ ಇವರು ದೇಶ-ವಿದೇಶ ಹಾಗೂ ಭಾರತದ 12 ರಾಜ್ಯಗಳಲ್ಲಿ ಬ್ಯಾಗ್ ವಿತರಿಸುತ್ತಿದ್ದು, ಅಶ್ವಥ್ ಹೆಗ್ಡೆ ಪ್ರಯೋಗಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದು ಭೇಟಿ ಮಾಡುವಂತೆ ಪತ್ರ ಬರೆದಿದ್ದಾರೆ. ಈ ಯುವ ಸಾಧಕನಿಗೆ ಪೋಬ್ಸ್ ಏಷ್ಯಾ ಪ್ರಶಸ್ತಿ, ಡಬ್ಲ್ಯುಪಿಆರ್ ಕಾರ್ಪೊರೇಶನ್ ಐಕಾನ್ ಆಪ್ ಇಂಡಿಯಾ 2017 ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.