ಬೆಳ್ತಂಗಡಿ: ವಿಶ್ವಮಾನವ ದಿನಾಚರಣೆ

ಬೆಳ್ತಂಗಡಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ರವರ ಜನ್ಮದಿನದ ಪ್ರಯುಕ್ತ ವಿಶ್ವಮಾನವ ದಿನಾಚರಣೆ-2018 ಕಾರ್ಯಕ್ರಮವು ತಾಲೂಕು ಮಿನಿವಿಧಾನಸೌಧ ಸಭಾಂಗಣದಲ್ಲಿ ಡಿ.29 ರಂದು ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತಾ.ಪಂ ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ ನೆರವೇರಿಸಿದರು. ತಾ.ಪಂ ಉಪಾಧ್ಯಕ್ಷೆ ಶ್ರೀಮತಿ ವೇದಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿನ್, ಮುಖ್ಯ ಭಾಷಣಾಕಾರರಾದ ಪುಂಜಾಲಕಟ್ಟೆ ಸ.ಪ.ಪೂ ಕಾಲೇಜು ಸಹ ಅಧ್ಯಾಪಕ ಧರಣೇಂದ್ರ ಕೆ, ತಾ.ಪಂ ಸದಸ್ಯರಾದ ಗೋಪಿನಾಥ ನಾಯಕ್, ತಾಲೂಕು ಸಂಯೋಜಕ ಜಯಾನಂದ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.