ಅಳದಂಗಡಿ: ಎಣ್ಣೆ ಮಿಲ್ ಬೆಂಕಿಗಾಹುತಿ

ಅಳದಂಗಡಿ : ಇಲ್ಲಿಯ ಅಳದಂಗಡಿ ಪೇಟೆಯಲ್ಲಿ ಇರುವ  ಜೀನೇಂದ್ರ ಎಂಬವರ ಮಾಲಕತ್ವದ ಎಣ್ಣೆ ಮಿಲ್ ಬೆಂಕಿಗಾಹುತಿಯಾದ ಘಟನೆ ಡಿ.27 ರಂದು ರಾತ್ರಿ ನಡೆದಿದೆ. ಘಟನೆಯಿಂದಾಗಿ ಲಕ್ಷಾಂತರ ಮೌಲ್ಯದ ತೆಂಗಿನೆಣ್ಣೆ, ಕೊಬ್ಬರಿ , ಬೃಹತ್ ಯಂತ್ರೋಪಕರಣಗಳು ಸುಟ್ಟು ಭಸ್ಮವಾಗಿ, ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಅಗ್ನಿಶಾಮಕದಳ ಹಾಗೂ ಸ್ಥಳೀಯರ ಸೂಕ್ತ ಕಾರ್ಯಾಚರಣೆಯಿಂದ ಬೆಂಕಿನಂದಿಸುವ ಕಾರ್ಯ ನಡೆಯಿತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ದುರಂತ ಸಂಭವಿಸಿದೆ.  ಬೆಂಕಿ ದುರ್ಘಟನೆಯಿಂದ  ಸುತ್ತಮುತ್ತಲಿ ಮನೆ, ಅಂಗಡಿಗಳಿಗೂ ಬೆಂಕಿ ತಗುಲುವ ಸಂಭವವಿದ್ದು, ಅಗ್ನಿಶಾಮಕದವರ  ಸಕಾಲದ ಕಾರ್ಯಾಚರಣೆಯಿಂದ ಆಗಬಹುದಾದ  ಅನಾಹುತ ತಪ್ಪಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.