ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ಪದಗ್ರಹಣ ಸಮಾರಂಭ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ಸಮಾಜದಲ್ಲಿರುವ ಬಡವರು, ದುರ್ಬಲರನ್ನು ಕೈ ಎತ್ತಿ ಮೇಲೆ ತರುವ ಕಾರ್ಯ ಸಂಘಟನೆಯಿಂದಾಗಬೇಕು : ವಸಂತ ಬಂಗೇರ

ಬೆಳ್ತಂಗಡಿ : ನಮ್ಮ ದೇಶದಲ್ಲಿ ಸಾವಿರ ಜಾತಿಯಿದೆ. ಎಲ್ಲಾ ಜಾತಿ ಧರ್ಮದವರು ಸಂಘಟನೆ ಮಾಡುತ್ತಾರೆ, ಅದರ ಉದ್ದೇಶ ಒಳ್ಳೆಯದಾಗಿರಬೇಕು, ಸಂಘಟನೆಯಿಂದ ಬಲ ಬರುತ್ತದೆ, ಶಕ್ತಿ ಬರುತ್ತದೆ, ಆ ಶಕ್ತಿಯನ್ನು ನಮ್ಮ ಸಮಾಜದಲ್ಲಿರುವ ಬಡವರು, ದುರ್ಬಲರು, ಯಾರು ಬಡತನ ರೇಖೆಯಿಂದ ಕೆಳಗೆ ಇದ್ದಾರೋ ಅಂತವರನ್ನು ಗುರುತಿಸಿ ಕೈ ಎತ್ತಿ ಮೇಲೆ ತರುವ ಕಾರ್ಯ ಸಂಘಟನೆಯಿಂದ ಆಗಬೇಕು ಎಂದು ಬೆಳ್ತಂಗಡಿ ಮಾಜಿ ಶಾಸಕ.ಕೆ ವಸಂತ ಬಂಗೇರ ಹೇಳಿದರು.
ಅವರು ಡಿ. 23 ರಂದು ಬೆಳ್ತಂಗಡಿ ಸುವರ್ಣ ಆರ್ಕೇಡ್‌ನ ಸಪ್ತಪದಿ ಸಭಾಭವನದಲ್ಲಿ ನಡೆದ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬಿರುವೆರ್ ಕುಡ್ಲ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಬಿಲ್ಲವರ ಸಂಘ, ಯುವ ಬಿಲ್ಲವ ವೇದಿಕೆ, ಯುವ ವಾಹಿನಿ ಘಟಕ, ಮಹಿಳಾ ಬಿಲ್ಲವ ವೇದಿಕೆ ಇವುಗಳನ್ನು ನಮ್ಮ ಬಿಲ್ಲವ ಸಂಘಟನೆಯ ಅಂಗ ಸಂಸ್ಥೆಗಳು, ಈ ಎಲ್ಲಾ ಅಂಗ ಸಂಸ್ಥೆಗಳಿಗೆ ಪ್ರೋತ್ಸಾಹ ಕೂಡುವುದು ನಮ್ಮ ಸಮಾಜದ ಬಂಧುಗಳ ಕರ್ತವ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಮಂಗಳೂರು ಇದರ ಸ್ಥಾಪಕಧ್ಯಕ್ಷ ಉದಯ ಪೂಜಾರಿ ವಹಿಸಿ ಮಾತನಾಡಿ ನಮ್ಮ ಸಂಘಟನೆಯ ಮುಖ್ಯ ಉದ್ದೇಶ ಸಮಾಜಸೇವೆ. ಪ್ರತಿ ತಿಂಗಳು ಅರ್ಹರನ್ನು ಗುರುತಿಸಿ ಧನ ಸಹಾಯ, ಸೌಲಭ್ಯ ವಿತರಣೆ ಮತ್ತಿತರ ಕಾರ್ಯವನ್ನು ಮಾಡುತ್ತಿದ್ದೇವೆ. ನಮ್ಮ ಸಂಘಟನೆ ಇದುವರೆಗೂ ಒಂದೂವರೆ ಕೋಟಿಗೂ ಮಿಕ್ಕಿ ಆರ್ಥಿಕ ನೆರವು ನೀಡಿದೆ ಎಂದರು.
ಮುಖ್ಯ ಅತಿಥಿನೆಲೆಯಲ್ಲಿ ಬೆಳ್ತಂಗಡಿ ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ ಮಾತನಾಡಿ ಬಿರುವೆರ್ ಕುಡ್ಲ ಸಂಘಟನೆ ನಮ್ಮಲ್ಲಿರುವ ಅಶಕ್ತರಿಗೆ ನೆರವಾಗಬೇಕು. ಆ ಮುಖೇನ ಸಂಘಟನೆಯನ್ನು ಪ್ರೀತಿಸುವ ಹಾಗೆ ಮಾಡಬೇಕು ಎಂದರು.
ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಮಾತನಾಡಿ ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಬಿರುವೆರ್ ಕುಡ್ಲ ಸಂಘಟನೆಯ ಧ್ಯೇಯವಾಗಬೇಕು. ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ, ಕೋಟಿ-ಚೆನ್ನಯರ ತತ್ವ-ಆದರ್ಶಗಳನ್ನು ಪಾಲಿಸಿಕೊಂಡು ಮುಂದುವರೆದರೆ ಸಂಘಟನೆ ಬೆಳಯುವುದರೊಂದಿಗೆ ನಾವು ಬೆಳೆಯುತ್ತೇವೆ ಎಂದರು. ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್.ಬಿ.ಸುವರ್ಣ ಮಾತನಾಡಿ ಬಿರುವೆರ್ ಕುಡ್ಲದ ಕಾರ್ಯಕ್ರಮ ಅರ್ಥಪೂರ್ಣವಾದದ್ದು ಯಾಕೆಂದರೆ, ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ನೇತೃತ್ವದಲ್ಲಿ ಯುವ ಶಕ್ತಿ ಒಂದು ಗೂಡಿ ಆರ್ಥಿಕ ನೆರವು ಸಂಗ್ರಹಿಸಿ ಬಡವರ್ಗಕ್ಕೆ ಹಸ್ತಾಂತರಿಸಿ ಅವರ ಕಣ್ಣೀರೊರಸುವ ಪುಣ್ಯದ ಕೆಲಸ ಮಾಡುತ್ತಿದೆ. ಮಂಗಳೂರು ದಸಾರಕ್ಕೆ ಹೊಸ ರೂಪ ಕೊಟ್ಟ ಸಂಘಟನೆ ಇದ್ದರೆ ಅದು ಬಿರುವೆರ್ ಕುಡ್ಲ ಎಂದು ಹರ್ಷ ವ್ಯಕ್ತ ಪಡಿಸಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಕುಮಾರ್ ಉಪ್ಪಾರು, ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಮಂಗಳೂರು ಅಧ್ಯಕ್ಷ ರಾಕೇಶ್ ಪೂಜಾರಿ, ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಮಂಗಳೂರು ಸ್ಥಾಪಕ ಸದಸ್ಯ ಅಭಿಷೇಕ್ ಅಮೀನ್, ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಮಹಿಳಾ ವೇದಿಕೆ ಅಧ್ಯಕ್ಷೆ ವಿದ್ಯಾ ರಾಕೇಶ್, ಬೆಳ್ತಂಗಡಿ ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್, ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಪ್ರಶಾಂತ್ ಮಚ್ಚಿನ, ಬಿರುವೆಲ್ ಕುಡ್ಲ ಬೆಳ್ತಂಗಡಿ ಘಟಕದ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಪುತ್ತೂರು ಘಟಕ ಅಧ್ಯಕ್ಷ ಶೈಲು ಬಿರ್ವ ಅಗತ್ತಾಡಿ ದೋಲಬಾರಿಕೆ, ಬಜಪೆ ಘಟಕ ಅಧ್ಯಕ್ಷ ಶರತ್ ಪೂಜಾರಿ, ಮೂಡಬಿದ್ರೆ ಘಟಕ ಅಧ್ಯಕ್ಷ ಪ್ರಶಾಂತ್ ಬಿರ್ವ, ಮುಲ್ಕಿ ಘಟಕ ಅಧ್ಯಕ್ಷ ಕಿಶೋರ್ ಸಾಲ್ಯಾನ್, ಬಿರುವೆಲ್ ಕುಡ್ಲ ಬಂಟ್ವಾಳ ಘಟಕ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಬಿರುವೆಲ್ ಕುಡ್ಲ ಜೆಪ್ಪು ಘಟಕ ಅಧ್ಯಕ್ಷ ಪ್ರವೀಣ ಉಪಸ್ಥಿತರಿದ್ದರು.
ಗೌರವ ಸಲಹೆಗಾರ ನಿತ್ಯಾನಂದ ನಾವರ ಸ್ವಾಗತಿಸಿದರು, ನಿತೇಶ್ ಪೂಜಾರಿ ಮಾರ್ನಾಡು ನಿರೂಪಿಸಿ, ಉಪಾಧ್ಯಕ್ಷ ರಾಜೇಶ್ ಬಡಕ್ಕಿನ ವಂದಿಸಿದರು.
ಚಿತ್ರ: ಮನು ಮದ್ದಡ್ಕ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.