ಶ್ರೀ ಲಕ್ಷ್ಮೀ ಬ್ಯೂಟಿಪಾರ್ಲರ್ ಸ್ಥಳಾಂತರಗೊಂಡು ಶುಭಾರಂಭ

ಉಜಿರೆ: ಬೆಳಾಲು ಕ್ರಾಸ್ ಸಿ.ಟಿ ಎಲೆಕ್ಟ್ರಾನಿಕ್ಸ್ ಬಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಲಕ್ಷ್ಮೀ ಬ್ಯೂಟಿಪಾರ್ಲರ್ ಮತ್ತು ಟೈಲರಿಂಗ್ ಸಂಸ್ಥೆಯನ್ನು ಉಜಿರೆಯ ಮಾರಿಗುಡಿ ಬಳಿ ಇರುವ ಮಹಮ್ಮಾಯಿ ಕಾಂಪ್ಲೆಕ್ಸ್‌ಗೆ ಡಿ.24 ರಂದು ಸ್ಥಳಾಂತರಿಸಲಾಗಿದೆ.
ಈ ನೂತನ ಸಂಸ್ಥೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಯು.ವಿಜಯರಾಘವ ಪಡ್ವೆಟ್ನಾಯರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯು.ಶರತ್ ಕೃಷ್ಣ ಪಡ್ವೆಟ್ನಾಯ, ಉಜಿರೆಯ ಮೋಹನ್ ಶೆಟ್ಟಿಗಾರ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಅತಿಥಿಗಳನ್ನು ಶ್ರೀಮತಿ ವಾರಿಜ ಶ್ರೀಧರ್ ದಂಪತಿ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿ, ಎಲ್ಲರ ಸಹಕಾರ ಕೋರಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.