ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದವರಿಗೆ ಸನ್ಮಾನ

ಬೆಳ್ತಂಗಡಿ: 2018-19ನೇ ಸಾಲಿನ ಆತ್ಮಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ಸುಧಾಕರ ಜೈನ್ ಕೊಕ್ರಾಡಿ( ಸಮಗ್ರ ಕೃಷಿ ಪದ್ಧತಿ), ಕರುಣಾಕರ್ ಆಚಾರ್ಯ ಕುತ್ಲೂರು ಗ್ರಾಮ(ಸಾವಯವ ಕೃಷಿ), ಹಮೀದ್ ಉರುವಾಲು ಗ್ರಾಮ( ಹೈನುಗಾರಿಕೆ), ಶ್ರೀಧರ ಗೌಡ ತಣ್ಣೀರುಪಂತ ಗ್ರಾಮ( ತೋಟಗಾರಿಕೆ), ಉಮ್ಮಣ್ಣ ಗೌಡ ಕರಾಯ ಗ್ರಾಮ( ಕೋಳಿ ಸಾಕಾಣಿಕೆ) ಇವರಿಗೆ ಡಿ.24 ರಂದು ಕೃಷಿ ಇಲಾಖೆಯಲ್ಲಿ ನಡೆದ ರೈತ ದಿನಾಚರಣೆಯಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.


ಬೆಳ್ತಂಗಡಿ: 2017-18ನೇ ಸಾಲಿನಲ್ಲಿ ಭತ್ತದ ಬೆಳೆ ಸ್ಪರ್ಧೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಅಜಿತ್ ಕುಮಾರ್ ಆರಿಗ ನಡ ಗ್ರಾಮ(ಹೆಕ್ಟರ್‌ಗೆ 95.32 ಕ್ವಿಂ), ದ್ವಿತೀಯ ಸ್ಥಾನ ಪಡೆದ ವೃಷಭ ಕುಮಾರ್ ಕಳೆಂಜ ಗ್ರಾಮ( 92.00 ಕ್ವಿಂ), ತೃತೀಯ ಸ್ಥಾನ ಪಡೆದ ದಿನೇಶ್ ಗೌಡ ಪೊಸಂದೋಡಿ ತಣ್ಣೀರುಪಂತ ಗ್ರಾಮ(90.19ಕ್ವಿಂ), ತಾಲೂಕು ಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಪಡೆದ ಸತೀಶ್‌ಕುಮಾರ್ ಶೆಟ್ಟಿ ಬೆದ್ರಡ್ಡಗುತ್ತು ಮೂಡುಕೋಡಿ ಗ್ರಾಮ(87.92ಕ್ವಿಂ), ದ್ವಿತೀಯ ಸ್ಥಾನ ಪಡೆದ ಸೇಸಮ್ಮ ಬರಮೇಲು ಉಜಿರೆ ಗ್ರಾಮ(77.85ಕ್ವಿಂ), ತೃತೀಯ ಸ್ಥಾನ ಪಡೆದ ಜಿನ್ನಪ್ಪ ನಾಯ್ಕ ಬೊಳ್ನಡ್ಕ ತಣ್ಣೀರುಪಂತ ಗ್ರಾಮ(74.19ಕ್ವಿಂ) ಇವರನ್ನು ಡಿ.24 ರಂದು ಕೃಷಿ ಇಲಾಖೆಯಲ್ಲಿ ನಡೆದ ರೈತ ದಿನಾಚರಣೆಯಲ್ಲಿ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.