ಬಳಂಜ ವಾಲಿಬಾಲ್ ಕ್ಲಬ್ ಉದ್ಘಾಟನೆ ಹಾಗೂ ಬಿಡ್ಡಿಂಗ್ ಪ್ರಕ್ರಿಯೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಳಂಜ ಹೆಸರಿನಲ್ಲಿ ಒಗ್ಗಟ್ಟಿನ ಶಕ್ತಿಯಿದೆ : ಮನೋಹರ್ ಬಳಂಜ

ಬಳಂಜ : ಬಳಂಜ ಎಂಬ ಹೆಸರೇ ವಿಶೇಷವಾದದ್ದು, ಆ ಹೆಸರಿನಲ್ಲಿ ವಿಶೇಷವಾದ ಶಕ್ತಿಯಿದೆ. ಇವತ್ತು ಬಳಂಜ ಅತೀ ಹೆಚ್ಚು ಯುವಕರನ್ನು ಪಡೆದ ಗ್ರಾಮವಾಗಿದ್ದು ಇಲ್ಲಿ ರಾಜ್ಯ-ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ಪ್ರತಿಭೆಗಳಿದ್ದಾರೆ. ಮುಂದೆಯೂ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಬಳಂಜದ ಪ್ರಗತಿಯಲ್ಲಿ ಕೈಜೋಡಿಸೋಣ ಎಂದು ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ್ ಬಳಂಜ ಹೇಳಿದರು.
ಅವರು ಡಿ. 23 ರಂದು ಬಳಂಜದಲ್ಲಿ ನಡೆದ ಬಳಂಜ ವಾಲಿಬಾಲ್ ಕ್ಲಬ್ ಹಾಗೂ ಬಿಡ್ಡಿಂಗ್ ಪ್ರಕ್ರಿಯೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ವಹಿಸಿ ಮಾತನಾಡಿ, ಬಳಂಜದಲ್ಲಿ 100 ಕ್ಕಿಂತ ಹೆಚ್ಚು ವಾಲಿಬಾಲ್ ಆಟಗಾರರಿದ್ದು, ಎಲ್ಲರಿಗೂ ಅವಕಾಶ ನೀಡುವ ದೃಷ್ಟಿಯಲ್ಲಿ ಐಪಿಎಲ್ ಮಾದರಿಯ ಇಂತಹ ಬಿಡ್ಡಿಂಗ್ ಪ್ರಕ್ರಿಯೆ ನಡೆಸಿದ್ದು ಒಳ್ಳೆಯ ಬೆಳವಣಿಗೆ, ಇದೊಂದು ಮಾದರಿ ಕಾರ್ಯಕ್ರಮ ಎಂದು ಹರ್ಷ ವ್ಯಕ್ತ ಪಡಿಸಿದರು.
ವೇದಿಕೆಯಲ್ಲಿ ಸುದ್ದಿಬಿಡುಗಡೆ ಪತ್ರಿಕೆಯ ವ್ಯವಸ್ಥಾಪಕ ಮಂಜುನಾಥ ರೈ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಎಚ್.ಎಸ್, ತಾ.ಪಂ ಮಾಜಿ ಸದಸ್ಯ ಹೆಚ್. ಧರ್ಣಪ್ಪ ಪೂಜಾರಿ, ಬಳಂಜ ಶ್ರೀ ಕೊಡಮಣಿತ್ತಾಯ ಆವರಣಗೋಡೆ ಸಮಿತಿ ಅಧ್ಯಕ್ಷ ಗಣೇಶ್ ಬಿ.ಕೆ ಸುರ್ಯ, ಪ್ರಗತಿಪರ ಕೃಷಿಕ ಜಗದೀಶ್ ರೈ ಹಾನಿಂಜ ಬಳಂಜ, ವಾಲಿಬಾಲ್ ಕ್ಲಬ್‌ನ ಗೌರವಾಧ್ಯಕ್ಷ ಶೀತಲ್ ಪಡಿವಾಳ್, ಕಾರ್ಯದರ್ಶಿ ಯೋಗೀಶ್ ಯೈಕುರಿ ಉಪಸ್ಥಿತರಿದ್ದರು.
ಬಳಂಜ ವಾಲಿಬಾಲ್ ಕ್ಲಬ್‌ನ ಅಧ್ಯಕ್ಷ ರಾಕೇಶ್ ಹೆಗ್ಡೆ ಪ್ರಾsಸ್ತಾವಿಕ ಮಾತನಾಡಿ ಸ್ವಾಗತಿಸಿ, ಪ್ರಮೋದ್ ಬಿ.ಎಸ್ ಕಾರ್ಯಕ್ರಮ ನಿರೂಪಿಸಿ, ಸಂತೋಷ್ ಪಿ.ಕೋಟ್ಯಾನ್ ಬಳಂಜ ವಂದಿಸಿದರು.

ಐಪಿಎಲ್ ಮಾದರಿಯಲ್ಲಿ ಬಿಡ್ಡಿಂಗ್ ಪ್ರಕ್ರಿಯೆ :
ಬಳಂಜ ಗ್ರಾ.ಪಂ.ಗೆ ಒಳಪಟ್ಟ ಬಳಂಜ-ನಾಲ್ಕೂರು-ತೆಂಕಕಾರಂದೂರು ಈ ೩ ಗ್ರಾಮಗಳಲ್ಲಿ ಸುಮಾರು 100ಕ್ಕಿಂತ ಹೆಚ್ಚು ವಾಲಿಬಾಲ್ ಆಟಗಾರರಿದ್ದು, ೬ ಮಾಲಕರಿಗೆ ಒಂದೊಂದು ತಂಡ ನೀಡಿ 1 ಲಕ್ಷ ಪೊಂಟ್‌ನಲ್ಲಿ ಒರ್ವ ಆಟಗಾರರಿಗೆ ಮೂಲಬೆಲೆ 5 ಸಾವಿರದಂತೆ 10 ಆಟಗಾರರನ್ನು ಖರೀದಿಸುವ ಅವಕಾಶ ನೀಡಲಾಯಿತು. ಕೆಲವು ಆಟಗಾರರು ಅತೀ ಹೆಚ್ಚು ಬೆಲೆಗೆ ಖರೀದಿಯಾದರು. ಬಿಡ್ಡಿಂಗ್ ಪ್ರಕ್ರಿಯೆ ವಿನೂತನವಾಗಿ ಪ್ರಾರಂಭಗೊಂಡು ಯಶಸ್ವಿಯಾಗಿ ನಡೆಯಿತು.

ಗುರುತಿಸುವಿಕೆ : ಬಳಂಜ ವಾಲಿಬಾಲ್ ಲೀಗ್‌ನ ಪ್ರಥಮ ಸೀಸನ್‌ನ ಮಾಲಕರಾದ ದಿಮೀಸೋಲೆ ತಂಡದ ವಿನುಬಳಂಜ, ಕನ್ನಡದ ಕುವರ ತಂಡದ ಸತೀಶ್ ಬಿ.ಕೆ, ಎನ್.ಕೆ ಅಟೆಕ್ಕರ್‍ಸ್ ತಂಡದ ನೀಲಯ್ಯ ಹಾಗೂ ಬಿ.ವಿ.ಎಲ್ ಸೀಸನ್ 2ನ ಮಾಲಕರಾದ ಇಕೋಫ್ರೆಶ್ ಎಂಟರ್‌ಪ್ರೈಸಸ್ ತಂಡದ ರಾಕೇಶ್ ಹೆಗ್ಡೆ, ಕ್ಯಾಂಪಸ್ ವಾರಿಯರ್‍ಸ್ ತಂಡದ ಸಚಿನ್ ಶೆಟ್ಟಿ, ಪಂಚಲಿಂಗೇಶ್ವರ ತಂಡದ ಅಶ್ವತ್ ಹೆಗ್ಡೆ ಬಳಂಜ, ಕೋಟ್ಯಾನ್ ರಾಕರ್‍ಸ್ ತಂಡದ ಸಂತೋಷ್ ಪಿ.ಕೋಟ್ಯಾನ್, ಸುವರ್ಣ ಸ್ಟೈಕರ್‍ಸ್ ತಂಡದ ರಂಜಿತ್ ಹೆಚ್.ಡಿ, ಮಜ್ಜೇನಿಬೈಲು ತಂಡದ ವಿಶ್ವನಾಥ ಹೊಳ್ಳ ಹಾಗೂ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸಹಕರಿಸಿದ ಧನುಷ ರಾಕೇಶ್ ಹೆಗ್ಡೆ ಇವರನ್ನು ಗುರುತಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.