ಪಿಲಿಚಾಮುಂಡಿಕಲ್ಲು ಸಂಭ್ರಮದ ನೇಮೋತ್ಸವ

ಗುರುವಾಯನಕೆರೆ: ದೊಂಪದಬಲಿ ಉತ್ಸವ ಸಮಿತಿ ಪಿಲಿಚಾಮುಂಡಿಕಲ್ಲು ಗುರುವಾಯನಕೆರೆ ಇದರ ವತಿಯಿಂದ ಪ್ರತಿ ವರ್ಷದಂತೆ ನಡೆಯುವ ಕಾರಣಿಕ ದೈವ ಪಿಲಿಚಾಮುಂಡಿಯ ವರ್ಷಾವಧಿ `ದೊಂಪದಬಲಿ ಉತ್ಸವ’ವು ಡಿ.22 ರಂದು ರಾತ್ರಿ ಅಪಾರ ಸಂಖ್ಯೆಯ ಭಕ್ತರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಸಂಜೆ 6ಕ್ಕೆ ಪಾಡ್ಯಾರಬೀಡು ಮನೆಯಿಂದ ದೈವದ ಭಂಡಾರವನ್ನು ಬ್ಯಾಂಡ್, ಕೊಂಬು, ವಾದ್ಯಗಳ ವೈಭವ ಪೂರ್ಣ ಮೆರವಣಿಗೆಯೊಂದಿಗೆ ಪಿಲಿಚಾಮುಂಡಿಕಲ್ಲಿಗೆ ತರಲಾಯಿತು. ನಂತರ ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂಪರ್ತಣೆ ನಡೆಯಿತು. ರಾತ್ರಿ ಪಿಲಿಚಾಮುಂಡಿ ದೈವದ ನೇಮೋತ್ಸವ ಧಾರ್ಮಿಕ ವಿಧಿವತ್ತಾಗಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದಲ್ಲಿ ಊರ ಹಾಗೂ ಪರವೂರ ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಮಿತಿ ಗೌರವಾಧ್ಯಕ್ಷ ಪ್ರವೀಣ್‌ಕುಮಾರ್ ಅಜ್ರಿ ಪಾಡ್ಯಾರಬೀಡು, ಅಧ್ಯಕ್ಷ ಪುರುಷೋತ್ತಮ ಕೆ, ಪ್ರಧಾನ ಕಾರ್ಯದರ್ಶಿ ತೇಜಸ್ವಿ ಕೆ. ಪಾಡ್ಯಾರು, ಶ್ರೀನಿವಾಸ ಅಸ್ರಣ್ಣ ಮೂಡುಮನೆ, ಉಪಾಧ್ಯಕ್ಷ ವಿಶ್ವನಾಥ ಕೋಟ್ಯಾನ್, ಕಾರ್ಯದರ್ಶಿ ರಾಮಚಂದ್ರ ಶೆಟ್ಟಿ ಶಕ್ತಿನಗರ, ಕೋಶಾಧಿಕಾರಿ ಕೇಶವ ಆಚಾರ್ಯ ಪಾಡ್ಯಾರು ಹಾಗೂ ಸಮಿತಿಯ ಸದಸ್ಯರ ಸಹಕಾರದಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.
ಆಕರ್ಷಕ ದ್ವಾರ: ಪಾಡ್ಯಾರು ಗೆಳೆಯ ಬಳಗ ಪಿಲಿಚಾಮುಂಡಿಕಲ್ಲು ಇವರು ನೇಮೋತ್ಸವದ ಅಂಗವಾಗಿ ಪಿಲಿಚಂಡಿಕಲ್ಲಿನಲ್ಲಿ ನಿರ್ಮಿಸಿದ ಆಕರ್ಷಕ ದ್ವಾರವು ನೇಮೋತ್ಸವಕ್ಕೆ ವಿಶೇಷ ಮೆರುಗನ್ನು ನೀಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.