ದೇವಾಲಯ ಪ್ರಸಾದದ ಮೇಲೆ ಎಕ್ಸ್‌ಪೈರಿ ಡೇಟ್

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಪ್ಯಾಕ್ ಮಾಡಿ ವಿತರಿಸುವ ಪ್ರಸಾದದ ಮೇಲೆ ತಯಾರಿಸಿದ ದಿನ ಹಾಗೂ ಎಷ್ಟು ದಿನಗಳವರೆಗೆ ಮಾತ್ರ ಸೇವಿಸಬಹುದು ಎಂಬ ಮಾಹಿತಿ ನಮೂದಿಸುವುದು ಖಡ್ಡಾಯವಾಗಲಿದೆ.
ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ)ದ ಪ್ರಕಾರ `ಎಕ್ಸ್‌ಫೈರಿ ಡೇಟ್’ನಮೂದಿಸುವಂತೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಮುಜರಾಯಿ ಇಲಾಖೆ ದೇವಾಲಯಗಳು ಸೇರಿದಂತೆ ಎಲ್ಲಾ ಖಾಸಗಿ ದೇವಾಲಯಗಳು ಹಾಗೂ ಮಠಗಳಿಗೂ ಈ ನಿಯಮ ಅನ್ವಯವಾಗಲಿದೆ.
ಇತ್ತಿಚೆಗೆ ಚಾಮರಾಜನಗರ ಸುಳವಾಡಿ ಮಾರಮ್ಮ ದೇವಸ್ಥಾನದಲ್ಲಿ ನಡೆದ ವಿಷ ಪ್ರಸಾದ ಘಟನೆಯ ನಂತರ ಆರೋಗ್ಯ ಇಲಾಖೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಕ್ರಮ ಕೈಗೊಂಡಿದ್ದು, ದೇವಾಲಯಗಳಿಗೆ ಎಫ್‌ಎಸ್‌ಎಸ್‌ಎಐ ಪರವಾನಗಿ ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿಗಳಗೆ ಸೂಚನಾಪತ್ರ ಕಳುಹಿಸಿದೆ. ಪ್ರಸಾದ ಹಾಗೂ ಅನ್ನ ದಾಸೋಹ ನಡೆಸುವ ಎಲ್ಲಾ ದೇವಾಲಯಗಳು ಫುಡ್ ಲೈಸನ್ಸ್ ಪಡೆಯಬೇಕಾಗಿದೆ.

ಏನು ನಮೂದಿಸಬೇಕು
ಪ್ರಸಾದ ಪ್ಯಾಕ್‌ಮೇಲೆ ದೇವಾಲಯದ ಹೆಸರು, ತಯಾರಾದ ದಿನಾಂಕ, ಬ್ಯಾಚ್ ನಂಬರ್, ತೂಕ, ಬಳಕೆಯ ಅವಧಿ(ಎಕ್ಸ್‌ಫೈರಿ ಡೇಟ್, ಯೂಸ್ ಬಿಪೋರ್, ಬೆಸ್ಟ್ ಬಿಪೋರ್), ಪ್ರಸಾದಕ್ಕೆ ಬಳಸಿರುವ ಪದಾರ್ಥ ಇತ್ಯಾದಿ ಅಂಶಗಳನ್ನು ನಮೂದಿಸಬೇಕು. ತೀರ್ಥದ ಬಾಟಲಿಗಳಿಗೂ ಈ ನಿಯಮ ಅನ್ವಯವಾಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.