ಮಡಂತ್ಯಾರು: ಶ್ರೀ ದುರ್ಗಾ ಫರ್ನಿಚರ್ಸ್ & ಎಲೆಕ್ಟ್ರಾನಿಕ್ಸ್ ಶುಭಾರಂಭ

ಮಡಂತ್ಯಾರು: ಇಲ್ಲಿಯ ಬಸವನಗುಡಿ ಎಂಬಲ್ಲಿ ಶ್ರೀ ದುರ್ಗಾ ಫರ್ನಿಚರ್‍ಸ್ & ಎಲೆಕ್ಟ್ರಾನಿಕ್ಸ್ ಮಳಿಗೆಯು ಡಿ.23 ರಂದು ಶುಭಾರಂಭಗೊಂಡಿತು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಯು.ವಿಜಯ ರಾಘವ ಪಡ್ವೆಟ್ನಾಯ ನೂತನ ಮಳಿಗೆಯ ಉದ್ಘಾಟನೆಯನ್ನು ನೆರವೇರಿಸಿ, ಶುಭ ಹಾರೈಸಿದರು. ಉಜಿರೆ ಯು.ಸದಾಶಿವ ಶೆಟ್ಟಿ ಮತ್ತು ಸುನಂದಾ ದಂಪತಿ ದೀಪ ಪ್ರಜ್ವಲಿಸಿ, ಸಂಸ್ಥೆಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಮುಂಬೈ ವಿ.ಕೆ ಗ್ರೂಪ್ ಆಫ್ ಕಂಪನೀಸ್ ಚೇರ್‌ಮೆನ್ ಕೆ.ಎಂ ಶೆಟ್ಟಿ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರುಗಳಾದ ಫಾ| ಬಾಸಿಲ್‌ವಾಸ್, ಗುರುವಾಯನಕೆರೆ ವಿಜಯ ಕ್ರೆಡಿಟ್‌ಸಹಕಾರಿ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ, ಸಮಾಜ ಸೇವಕ ಸುಬ್ರಾಯ ಶೆಣೈ ಉಜಿರೆ, ಮಡಂತ್ಯಾರು ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ.ಕೆ, ಪುಂಜಾಲಕಟ್ಟೆ ಬದ್ರಿಯಾ ಜುಮ್ಮಾ ಮಸೀದಿಯ ಹಾಜಿ| ಅಶ್ರಫ್ ಫೈಜಿ, ವಾಮದಪದವು ವ್ಯವಸಾಯಿಕ ಸಹಕಾರಿ ಬ್ಯಾಂಕ್ ಅಧ್ಯಕ್ಷ ಯಶೋಧರ ಶೆಟ್ಟಿ, ಶ್ರೀ ಕ್ಷೇತ್ರ ಬಸವನಗುಡಿ ಆಡಳಿತ ಮೊಕ್ತೇಸರ ಎಂ.ಸಂಜೀವ ಶೆಟ್ಟಿ ಮುಗೆರೋಡಿ, ಸಂಗಬೆಟ್ಟು ಕ್ಷೇತ್ರದ ಜಿ.ಪಂ ಸದಸ್ಯ ಎಂ.ತುಂಗಪ್ಪ ಬಂಗೇರ, ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಜಶೇಖರ ಶೆಟ್ಟಿ ಭಂಡಾರಿಗುಡ್ಡೆ, ಪಿಲಾತಬೆಟ್ಟು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಕುಮಂಗಿಲ, ಪ್ರಮುಖರಾದ ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ, ಕಿರಣ್ ಕುಮಾರ್ ಶೆಟ್ಟಿ ಪ್ರಸಾದ್ ಬೆಳ್ತಂಗಡಿ, ಮತ್ತಿತರ ಗಣ್ಯರು ಗೌರವ ಉಪಸ್ಥಿತರಿದ್ದರು.
ಬಂದಂತಹ ಅತಿಥಿಗಳನ್ನು ಶ್ರೀ ದುರ್ಗಾ ವುಡ್ ಇಂಡಸ್ಟ್ರೀಸ್, ಉಜಿರೆ- ಮಡಂತ್ಯಾರು ಮಾಲಕರಾದ ಶ್ರೀಮತಿ ಜಯಲತಾ ಮತ್ತು ರಮೇಶ್ ಶೆಟ್ಟಿ ಹಾಗೂ ಶ್ರೀಮತಿ ಸವಿತಾ ಮತ್ತು ಉಮೇಶ್ ಶೆಟ್ಟಿ ದಂಪತಿಗಳು ಸ್ವಾಗತಿಸಿ, ಸತ್ಕರಿಸಿದರು. ಧರಣೇಂದ್ರ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.