ನಡ ಸರ್ಕಾರಿ ಪದವಿ ಪೂರ್ವ ಕಾಲೇಜು: ಪ್ರತಿಭಾ ಪುರಸ್ಕಾರ ಸಮಾರಂಭ

ನಡ: ವಿದ್ಯಾರ್ಥಿಯು ತನ್ನ ಜೀವನದಲ್ಲಿ ಪ್ರಕೃತಿ-ಸಂಸ್ಕೃತಿ ವಿಕೃತಿಗಳ ಬಗ್ಗೆ ಸರಿಯಾಗಿ ಅರ್ಥೈಸಿಕೊಂಡು ಶುದ್ಧ ಚಾರಿತ್ರ್ಯ ಜೀವನವನ್ನು ನಡೆಸಬೇಕು ಎಂದು ಕೊಕ್ರಾಡಿ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ನೋರ್ಬರ್ಟ್ ಮೊರ್ಟಿಸ್ ಹೇಳಿದರು. ಅವರು ನಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ನಡ ಗ್ರಾ.ಪಂ ಅಧ್ಯಕ್ಷ  ಶ್ರೀಮತಿ ಪೂರ್ಣಿಮಾ ಬಿ ಯವರು ಸಂಸ್ಥೆಯ ಅಗತ್ಯ ಕಾಮಗಾರಿಗಳಿಗೆ ಅನುದಾನದ ಭರವಸೆಯನ್ನಿತ್ತರು. ಲಾಯಿಲ ಕ್ಷೇತ್ರದ ಜಿ.ಪ ಸದಸ್ಯರಾದ ಶ್ರೀಮತಿ ಸೌಮ್ಯಲತಾ ಜಯಂತ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.  ಈ ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಕುಮಾರಿ ವರ್ಷಿತಾ, ಕುಮಾರಿ ಅಪ್ಸಾ ಬಾನು, ಕುಮಾರಿ ಹೇಮಾವತಿ ಇವರುಗಳಿಗೆ ಸನ್ಮಾನವನ್ನು ನೆರವೇರಿಸಲಾಯಿತು. ಅಂತೆಯೇ ಬಾಲಕರ ಶೌಚಾಲಯ ಕಾಮಗಾರಿ ನಿರ್ವಹಿಸಿದ ಕಂಟ್ರಾಕ್ಟರ್   ನಾಗರಾಜ್ ಎಸ್.ಸಿ., ನಡ ಸರ್ಕಾರಿ ಪ್ರೌಡ ಶಾಲೆಯ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಶ್ರೀ ಯಾಕುಬ್  ಇವರುಗಳನ್ನು ಗೌರವಿಸಲಾಯಿತು.

 ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಡ ಗ್ರಾ.ಪ. ಉಪಾಧ್ಯಕ್ಷ  ಸುಧಾಕರ ಪೂಜಾರಿ, ಸಿ.ಎ. ಬ್ಯಾಂಕ್ ಬೆಳ್ತಂಗಡಿ ಅಧ್ಯಕ್ಷ  ಮುನಿರಾಜ ಅಜ್ರಿ, ನಿವೃತ್ತ ಶಿಕ್ಷಕ  ಮೋಹನ್ ಎಸ್.ಜೈನ್, ನಡ ಸ.ಪ್ರೌ.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶರ್ಮಿಳಾ ಬಿ., ಗ್ರಾ.ಪ ಸದಸ್ಯರಾದ ಶ್ರೀಮತಿ ವೇದಾವತಿ, ಶ್ರೀಮತಿ ಮಂಜುಳ ಪ್ರಮುಖರಾದ   ರಾಜಶೇಖರ ಅಜ್ರಿ, ಕಾಲೇಜು ವಿದ್ಯಾರ್ಥಿ ನಾಯಕ ನಿತೇಶ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ  ಚಂದ್ರಶೇಖರ್ ಸ್ವಾಗತಿಸಿ, ರಾಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ವಂದಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಲಿಲ್ಲಿ ಪಿ.ವಿ ವರದಿ ವಾಚಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಪವಿತ್ರ ಕ್ರೀಡಾವಿಜೇತರ ಪಟ್ಟಿಯನ್ನು, ಇತಿಹಾಸ ಉಪನ್ಯಾಸಕಿ ವಿದ್ಯಾವತಿ ಸಾಂಸ್ಕೃತಿಕ ವಿಜೇತರ ಪಟ್ಟಿಯನ್ನು, ಸಮಾಜಶಾಸ್ತ್ರ ಉಪನ್ಯಾಸಕಿ ಫರ್ಝಾನಾ ದತ್ತಿನಿಧಿ ವಿಜೇತರ ಪಟ್ಟಿ ವಾಚಿಸಿದರು. ಆಂಗ್ಲ ಭಾಷಾ ಉಪನ್ಯಾಸಕ ಮೋಹನ ಗೌಡ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.