ಹೋಲಿ ರಿಡೀಮರ್ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ

ಬೆಳ್ತಂಗಡಿ: ಏಸು ಕ್ರಿಸ್ತನ ಜನ್ಮದಿನವನ್ನು ಡಿ. 22 ರಂದು ಹೋಲಿ ರಿಡೀಮರ್ ಶಾಲೆಯಲ್ಲಿ ಆಚರಿಸಲಾಯಿತು. ಚರ್ಚ್ ಪಾಲನಾ ಮಂಡಳಿಯ ಸದಸ್ಯ ಲಾನ್ಸಿ ಪಿರೇರಾ ಮಾತನಾಡಿ, ಶಾಂತಿ ಧೂತ ಏಸು ಕ್ರಿಸ್ತನ ಜೀವನ ಹಾಗೂ ಸಂದೇಶಗಳು ನಮ್ಮೆಲ್ಲರಲ್ಲಿ ಶಾಂತಿ , ಪ್ರೀತಿ ಹಾಗೂ ಭ್ರಾತೃತ್ವವನ್ನು ಮೂಡಿಸಲಿ ಎಂದು ಕ್ರಿಸ್ಮಸ್ ಹಬ್ಬ ಹಾಗೂ ಹೊಸವರ್ಷಕ್ಕೆ ಶುಭಾಶಯವನ್ನು ಕೋರಿದರು.

ಶಾಲಾ ಮುಖ್ಯೋಪಾಧ್ಯಾಯ ವಂ. ಫಾ|ಜೇಸನ್ ಮೋನಿಸ್‌ರವರು ಕ್ರಿಸ್ಮಸ್ ಹಬ್ಬದ ಆಚರಣೆ , ಗೋದಲಿ , ಸಾಂತಾಕ್ಲಾಸರ ಹಿನ್ನಲೆ ಮತ್ತು ಮಹತ್ವವನ್ನು ತಿಳಿಸಿ, ಕ್ರಿಸ್ಮಸ್ ಹಬ್ಬ ಮತ್ತು ನೂತನ ವರ್ಷಕ್ಕೆ ಶುಭಾಶಯವನ್ನು ಕೋರಿ ಆಶೀರ್ವದಿಸಿದರು. ವಿದ್ಯಾರ್ಥಿಗಳು ಏಸು ಕ್ರಿಸ್ತನ ಜನನದ ಹಿನ್ನಲೆ ಮಹತ್ವ ಹಾಗೂ ಸಂದೇಶವನ್ನು ಹಾಗೂ ಹಾಡು, ನೃತ್ಯ ರೂಪಕದ ಮೂಲಕ ಪ್ರದರ್ಶಿದರು. ಮಕ್ಕಳಿಂದ ತಯಾರಿಸಲ್ಪಟ್ಟ ಗೋದಲಿ, ಕ್ರಿಸ್ಮಸ್ ಮರ ಹಾಗೂ ಸಾಂತಕ್ಲಾಸನ ಆಗಮನವು ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು. ವಿದ್ಯಾರ್ಥಿನಿ ಸ್ನೇಹಾ ಕಾರ್‍ಯಕ್ರಮ ನಿರೂಪಿಸಿ, ಲೂಹಾ ಸ್ವಾಗತಿಸಿ, ವಿಯೋನ ರೆಗೋ ವಂದಿಸಿದರು. ಸಹ ಶಿಕ್ಷಕಿಯರಾದ ಶ್ರೀಮತಿ ಪಲ್ಲವಿ ಹಾಗೂ ಶ್ರೀಮತಿ ಅಶ್ವಿನಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.