ಡಿ. 29: ಉಜಿರೆಯಲ್ಲಿ ಹಿರಿಯ ನಾಗರಿಕರ ಪ್ರಬುದ್ಧ ಸಮಾವೇಶ

ಬೆಳ್ತಂಗಡಿ: ಕರ್ನಾಟಕ ರಾಜ್ಯ ನಿವೃತ ನೌಕರರ ತಾಲೂಕು ಶಾಖೆಯ ವತಿಯಿಂದ ಡಿ. 29 ರಂದು ಉಜಿರೆ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಹಿರಿಯ ನಾಗರಿಕರ ಪ್ರಬುದ್ಧ ಸಮಾವೇಶ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಿ ವಿಠಲ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಈ ಸಮಾರಂಭದಲ್ಲಿ ಹಿರಿಯ ನಾಗರಿಕರಿಗಾಗಿ ಇಲಾಖಾ ಮಾಹಿತಿಗಳು ನಡೆಯಲಿದೆ. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಕೆ ಸುಂದರ ಪೂಜಾರಿ, ಆರೋಗ್ಯ ಮಾಹಿತಿಗಾಗಿ ಡಾ.ಸಂತೋಷ್ ಕೆ, ಕಾನೂನು ಮಾಹಿತಿಗಾಗಿ ಜಿಲ್ಲಾ ನ್ಯಾಯಾಧೀಶ ಮಲ್ಲಣ್ಣ ಗೌಡ ಪಾಟೀಲ್ ಮತ್ತು ವಕೀಲೆ ಆರ್ ಸುಭಾಷಿಣಿ ಅನಂತ್, ಅರ್ಜಿಗಳ ವಿಲೇ ಮಾಹಿತಿಗಾಗಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಲಿದ್ದಾರೆ.
ಎಲ್ಲ ಕಾರ್ಯಕ್ರಮಗಳೂ ಸಮಯದ ಮಿತಿಯೊಳಗೆ ನಡೆಯಲಿದ್ದು, ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು, ಹರೀಶ್ ಪೂಂಜ ಮತ್ತು ಹರೀಶ್ ಕುಮಾರ್ ಭಾಗಿಯಾಗಲಿದ್ದಾರೆ. ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಣೆ, ಪ್ರಬುದ್ಧ ಮಾಹಿತಿ ಕೈಪಿಡಿ ಉಚಿತ ವಿರಣೆ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು. ಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ಹೆಚ್ ಪದ್ಮಕುಮಾರ್, ಕೋಶಾಧಿಕಾರಿ ವಿಶ್ವಾಸ ರಾವ್, ಉಪಾಧ್ಯಕ್ಷ ಸನ್ಮತ್ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.