ವೇಣೂರು: ವಿವಿಧ ಪ್ರೌಢಶಾಲೆಗಳಿಗೆ ಉಪ ನಿರ್ದೇಶಕ ವೈ. ಶಿವರಾಮಯ್ಯ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಎಸ್‌ಎಸ್‌ಎಲ್‌ಸಿ ಶಿಕ್ಷಣ ಕ್ಷೇತ್ರದ ಅಡಿಪಾಯ: ವೈ. ಶಿವರಾಮಯ್ಯ

ವೇಣೂರು: 2019 ರ ಮಾರ್ಚ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಡಿ.20ರಂದು ವೇಣೂರು ವಲಯದ ವಿವಿಧ ಪ್ರೌಢ ಶಾಲೆಗಳಿಗೆ ಭೇಟಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ವೈ. ಶಿವರಾಮಯ್ಯ ಅವರು ವಿವಿಧ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ಮುಂದಿನ ವಿದ್ಯಾಭ್ಯಾಸಕ್ಕೆ ಎಸ್‌ಎಸ್‌ಎಲ್‌ಸಿ ಪ್ರಾಮುಖ್ಯತೆ ಪಡೆಯುತ್ತದೆ. ಏಕಾಗ್ರತೆಯಿಂದ ಜ್ಞಾನರ್ಜನೆ ಮಾಡಿ. ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ ಬದುಕನ್ನು ರೂಪಿಸುವ ಶಕ್ತಿ ಇರುತ್ತದೆ. ವಿದ್ಯಾಭ್ಯಾಸದಲ್ಲಿ ಹುನ್ನತ ಗುರಿಯನ್ನು ಇಟ್ಟುಕೊಂಡಾಗ ವಿದ್ಯಾರ್ಜನೆ ಸುಲಭವಾಗುತ್ತದೆ. ಶಿಕ್ಷಣಕ್ಕೆ ಸರಕಾರ ಸವಲತ್ತುಗಳ ಮೂಲಕ ಸಾಕಷ್ಟು ಪ್ರೋತ್ಸಾಹ ನೀಡಿದೆ. ಶಿಕ್ಷಕರ ಜತೆಗೆ ಪೋಷಕರೂ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಬೇಕು. ವಿದ್ಯಾರ್ಥಿಗಳೂ ಯಾರೂ ಅಸಮರ್ಥರಲ್ಲ. ಬುದ್ದಿವಂತಿಕೆಯನ್ನು ಬಳಸಿಕೊಂಡಾಗ ಉತ್ತಮ ಅಂಕ ಪಡೆಯಲು ಸಹಕಾರಿ ಆಗುತ್ತದೆ ಎಂದರು. ವೃತ್ತೀಪರ ಕೋರ್ಸುಗಳಿಗೆ ಎಸ್‌ಎಸ್‌ಎಲ್‌ಸಿಯ ಅಂಕ ವೇದಿಕೆಯಾಗುತ್ತದೆ. ಈಗಾಗಿ ಎಸ್‌ಎಸ್‌ಎಲ್‌ಸಿ ಶಿಕ್ಷಣ ಕ್ಷೇತ್ರದ ಅಡಿಪಾಯ. ಪಾಸಾಗುವುದಕ್ಕಿಂತ ಫೇಲ್ ಆಗುವುದು ತುಂಬಾ ಕಷ್ಟ ಅನ್ನುವಂತಹ ಮಟ್ಟಿಗೆ ವಿದ್ಯಾರ್ಜನೆಯಲ್ಲಿ ತೊಡಗಿಕೊಳ್ಳಿ ಎಂದರು.
ಆರೋಗ್ಯ ಕಾಪಾಡಿ:
ಪರೀಕ್ಷೆಯ ಬಗ್ಗೆ ಭಯ ಬೇಡ. ಇಂದು ಪರೀಕ್ಷೆ ವಿಧಾನ ಸುಲಭವಾಗಿದೆ. ಯಾವುದೇ ಗೊಂದಲ, ಸಂಶಯಗಳು ಇದ್ದಾಗ ನೇರವಾಗಿ ಶಿಕ್ಷಕರಲ್ಲಿ ಕೇಳಿ. ಆರೋಗ್ಯದ ಬಗ್ಗೆ ನಿಗಾ ಇಡಿ. ಅಧ್ಯಾಪಕರ ಮಾರ್ಗದರ್ಶನದಂತೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದರು.
ಬಿಸಿಯೂಟ ಸವಿದರು!
ವೇಣೂರು ಪ್ರೌಢಶಾಲೆಗೆ ಉಪನಿರ್ದೇಶಕರು ಭೇಟಿ ನೀಡಿದ ಸಂದರ್ಭದಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯುತ್ತಿತ್ತು. ಈ ಬಗ್ಗೆ ಶಾಲೆಯ ಕಾರ್ಯವೈಖರಿ ಬಗ್ಗೆ ಅಧಿಕಾರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಎಸ್‌ಎಸ್‌ಎಲ್‌ಸಿಯ ಮೂರು ವಿಭಾಗಗಳಲ್ಲಿ 204 ವಿದ್ಯಾರ್ಥಿಗಳು ಇರುವ ಬಗ್ಗೆ ಶ್ಲಾಘಿಸಿದರು. ಬಳಿಕ ಮಧ್ಯಾಹ್ನದ ಬಿಸಿಯೂಟವನ್ನು ಸವಿದರು.
ಪೆರಿಂಜೆ ಎಸ್‌ಡಿಎಂ ಅನುದಾನಿತ ಪ್ರೌಢಶಾಲೆ, ವೇಣೂರು ಸರಕಾರಿ ಪ್ರೌಢಶಾಲೆ, ಕೊಕ್ರಾಡಿ ಹಾಗೂ ಕಾಶಿಪಟ್ಣ ಪ್ರೌಢಶಾಲೆಗಳಿಗೆ ಅಧಿಕಾರಿಯವರು ಭೇಟಿ ನೀಡಿ ವಿದ್ಯಾರ್ಥಿಗಳ ಪರೀಕ್ಷೆ ಭಯ ಹೋಗಲಾಡಿಸಿ ಧೈರ್ಯ ತುಂಬಿದರು.
ಬಾನುಲಿ ಪಾಠ ಆಲಿಸಿ:
ಕಾಶಿಪಟ್ಣ ಶಾಲೆಯಲ್ಲಿ ಬಾನುಲಿ ಪಾಠ ಆಲಿಸದಿರುವ ಬಗ್ಗೆ ಎಚ್ಚರಿಸಿದ ಅಧಿಕಾರಿಯವರು ಬಾನುಲಿ ಪಾಠ ಮಕ್ಕಳಿಗೆ ಅನುಕೂಲವಾಗಲಿದೆ. ಇದನ್ನು ಆಲಿಸಿ ಪಾಠ ಮಾಡುವಂತೆ ಸೂಚಿಸಿದರು.
ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಮೂಡಬಿದಿರೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕೈಕಿಣಿ, ಪ್ರಮುಖರಾದ ಸತೀಶ್ ಕಾಶಿಪಟ್ಣ, ಮೋಹನ ಅಂಡಿಂಜೆ, ಇಸ್ಮಾಯಿಲ್ ಕೆ. ಪೆರಿಂಜೆ, ವಿವಿಧ ಶಾಲೆಯ ಮುಖ್ಯ ಶಿಕ್ಷಕರಾದ ಮುಕುಂದಚಂದ್ರ, ವೆಂಕಟೇಶ್ ಎಸ್. ತುಳುಪುಳೆ, ಶ್ರೀಕೃಷ್ಣ, ಪದ್ಮಿನಿ ಉಪಸ್ಥಿತರಿದ್ದರು.
ದೇಶದ ನಕ್ಷೆ ಬಿಡಿಸಿದರು:
ಕಾಶಿಪಟ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ದೇಶದ ನಕ್ಷೆ ಹಾಗೂ ವಿದ್ಯಾರ್ಥಿಗಳಿಗೆ ವಿಜ್ಞಾನಕ್ಕೆ ಸಂಬಂಧಿತ ಚಿತ್ರವನ್ನು ಬಿಡಿಸುವಂತೆ ಸೂಚಿಸಿದರು. ವಿದ್ಯಾರ್ಥಿಗಳು ಪುಸ್ತಕದಲ್ಲಿ ಚಿತ್ರಗಳನ್ನು ಬಿಡಿಸಿ ಪ್ರದರ್ಶಿಸಿದರು. ಈ ವೇಳೆ ಭಾರತದ ಚಿತ್ರವನ್ನು ಬೋರ್ಡಿನ ಮೇಲೆ ಬಿಡಿಸುವ ಮೂಲಕ ಸುಲಭ ವಿಧಾನವನ್ನು ಹೇಳಿಕೊಟ್ಟರು.
ಸೈಕಲ್ ವಿತರಣೆಗೆ ಸರಕಾರ ಕ್ರಮ:
ಸೈಕಲ್ ವಿತರಣೆ ವಿಳಂಬದ ಬಗ್ಗೆ ನಮ್ಮ ವರದಿಗಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ನಿರ್ದೇಶಕರು, ಕಳಪೆ ಗುಣಮಟ್ಟದ ಹಿನ್ನೆಲೆಯಲ್ಲಿ ಸರಕಾರ ವಿತರಿಸಲು ತಡೆ ನೀಡಿದೆ. ಈ ಸರಕಾರ ಮತ್ತು ಕಂಪೆನಿ ಮಧ್ಯೆ ಮಾತುಕತೆ ನಡೆಯುತ್ತಿದ್ದು, ಶೀಘ್ರ ಪರಿಹಾರ ಕ್ರಮ ಜರಗಲಿದೆ ಎಂದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.