ಯುವವಾಹಿನಿ ಬೆಳ್ತಂಗಡಿ ಘಟಕ ಕ್ರಿಕೆಟ್ ಪಂದ್ಯಾಟದ ಸಮಾರೋಪ

ಬೆಳ್ತಂಗಡಿ: ಯುವ ಸಮುದಾಯ ವನ್ನು ಒಟ್ಟುಗೂಡಿಸಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ಅಶಕ್ತರಿಗೆ ಸಂಜೀವಿನಿಯಾಗಿ, ಇಂತಹ ಕ್ರೀಡಾಕೂಟದ ಮೂಲಕ ನೊಂದವರಿಗೆ ನೆರವನ್ನು ನೀಡುತ್ತಾ ನುಡಿದಂತೆ ನಡೆಯುತ್ತಿರುವ ಸಂಘಟನೆ ಅದು ಯುವವಾಹಿನಿ ಬೆಳ್ತಂಗಡಿ ಘಟಕ ಎಂದು ನೋಟರಿ ವಕೀಲ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಭಗೀರಥ ಜಿ. ಹೇಳಿದರು.
ಅವರು ಬೆಳ್ತಂಗಡಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದಿಂದ ನಡೆದ ಸಾಂತ್ವನ ನಿಧಿಯ ಸಹಾಯಾರ್ಥ ನಡೆದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕರಾದ ಕೆ. ಪ್ರಭಾಕರ ಬಂಗೇರ ,ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೈಲೇಶ್ ಕುಮಾರ್ ಕುರ್ತೋಡಿ ,ಗುರುದೇವ ಬ್ಯಾಂಕಿನ ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ ಕಂಡೆಂತ್ಯಾರು, ಜಿಲ್ಲಾ ಯುವಜನ ಒಕ್ಕೂಟದ ಗೌರವ ಅಧ್ಯಕ್ಷರಾದ ರಾಜೀವ್ ಸಾಲಿಯಾನ್ ಮುಂಡೂರು, ತಾಲೂಕು ವಕೀಲರ ಸಂಘದ ಪ್ರದಾನ ಕಾರ್ಯದರ್ಶಿ ಮನೋಹರ್ ಇಳಂತಿಲ, ಸಂದರ್ಭೋಚಿತವಾಗಿ ಮಾತನಾಡಿದರು ಘಟಕದ ಅಧ್ಯಕ್ಷ ಪ್ರಶಾಂತ್ ಮಚ್ಚಿನ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಯುವ ಕಾಂಗ್ರೆಸ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ಅಭಿನಂದನ್ ಹರೀಶ್ ಕುಮಾರ್, ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷರು ಲಯನ್ಸ್ ಜಿಲ್ಲೆ ೩೧೭ಆ ನಿತ್ಯಾನಂದ ನಾವರ, ನಗರ ಪಂಚಾಯತ್ ಸದಸ್ಯರಾದ ಶ್ರೀಮತಿ ತುಳಸಿ ಕರುಣಾಕರ್, ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ ಅಧ್ಯಕ್ಷ ಸಂತೋಷ್ ಕುಮಾರ್ ಉಪ್ಪಾರು, ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ಅಧ್ಯಕ್ಷ ರಾಜೇಶ್ ಕೋಟ್ಯಾನ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಕ್ರೀಡಾ ಸಂಚಾಲಕರಾದ ಉಮೇಶ್ ಸುವರ್ಣ ಶಿರ್ಲಾಲು, ಶಶಿಧರ್ ಆದೇಲು, ಉಮಾನಾಥ್ ಕೋಟ್ಯಾನ್ ಬೆಳಾಲು, ಪವನ್ ಕುಮಾರ್ ಕಟ್ಟೆ, ರಾಕೇಶ್ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಜಯರಾಜ್ ನಡಕ್ಕರ ವಂದಿಸಿ, ನಿರ್ದೇಶಕ ಅಶ್ವಥ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.