ವಿಮುಕ್ತಿ: ಓದುವ ಹಾಗೂ ಗಣಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ

ಕಪುಚಿನ್ ಕೃಷಿಕ್ ಸೇವಾ ಕೇಂದ್ರ ವಿಮುಕ್ತಿ ಲಾಯಿಲ ಹಾಗೂ ವೋಲ್ಕಾರ್ಟ್ ಫೌಂಡೇಶನ್ ಇಂಡಿಯಾನ್ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದೊಂದಿಗೆ ಓದುವ ಹಾಗೂ ಗಣಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು. ವಿಮುಕ್ತಿ ಸಂಸ್ಧೆಯ ನಿರ್ದೇಶಕ ವಂ.ಫಾ| ವಿನೋದ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ, ಶಿಕ್ಷಣದ ಗುಣಮಟ್ಟ ಹಾಗೂ ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳನ್ನು ಮುಂದೆ ತರುವುದು ಹಾಗೂ ಮಕ್ಕಳ ವಿದ್ಯಾಭಾಸ ಉನ್ನತ ಹಂತದವರೆಗೆ ಮುಂದುವರೆಸಬೇಕೆಂಬುದು ಸಂಸ್ಧೆಯ ಗುರಿಯಾಗಿದ್ದು, ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಿ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಶುಭಹಾರೈಸಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡ್ಲಾಡಿಯ ಮುಖ್ಯಶಿಕ್ಷಕಿಯಾದ ಶ್ರೀಮತಿ ರಾಜೇಶ್ವರಿ ಶಿಕ್ಷಕರ ಕೊರತೆ ಇರುವ ಶಾಲೆಗಳನ್ನು ಗುರುತಿಸಿ 25 ಶಾಲೆಗಳಿಗೆ ಶಿಕ್ಷಕರನ್ನು ನೀಡುವ ಮುಖಾಂತರ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸುದರಲ್ಲಿ ಸಂಸ್ಧೆಯು ಮಹತ್ತರ ಪಾತ್ರವನ್ನು ವಹಿಸಿದೆ ಇನ್ನೂ ಮುಂದಕ್ಕೆ ಇದೇ ರೀತಿಯ ಸಹಕಾರವನ್ನು ಕೋರಿ ಶುಭಹಾರೈಸಿದರು.
ದಯಾ ವಿಶೇಷ ಶಾಲೆಯ ಮುಖ್ಯ ಶಿಕ್ಷಕರಾದ ವಂ.ಫಾ ಎಡ್ವಿನ್ ಡಿಸೋಜ ಇವರು ಬೆಳ್ತಂಗಡಿ ತಾಲೂಕಿನ ಹಲವು ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಇದ್ದು ಶಿಕ್ಷಕರ ಕೊರತೆಯನ್ನು ನಿವಾರಿಸುದರಲ್ಲಿ ಈ ಕಾರ್ಯಕ್ರಮವು ಪೂರಕವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಆಯ್ಕೆಯಾದ 25 ಶಾಲೆಗಳ ಶಿಕ್ಷಕರು, ಶಾಲಾ ಮುಖ್ಯ ಶಿಕ್ಷಕರು ಎಸ್.ಡಿ.ಯಮ್.ಸಿ ಸದಸ್ಯರು ವಿಮುಕ್ತಿ ಸಿಬ್ಬಂದಿಗಳು ಭಾಗವಹಿಸಿದ್ದರು. ಶ್ರೀಮತಿ ಲವೀನಾ ಸ್ವಾಗತಿಸಿ,ಕು.ರೋಹಿನಿ ವಂದಿಸಿ ಕು.ಪೂರ್ಣಿಮ ಮೋನಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಆಯ್ಕೆಯಾದ ವಿಶೇಷ ಶಾಲೆಯ ಮುಖ್ಯ ಶಿಕ್ಷಕರಾದ ವಂ.ಫಾ ಎಡ್ವಿನ್ ಡಿಸೋಜ ಇವರು ಬೆಳ್ತಂಗಡಿ ತಾಲೂಕಿನ ಹಲವು ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಇದ್ದು ಶಿಕ್ಷಕರ ಕೊರತೆಯನ್ನು ನಿವಾರಿಸುದರಲ್ಲಿ ಈ ಕಾರ್ಯಕ್ರಮವು ಪೂರಕವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಆಯ್ಕೆಯಾದ 25 ಶಾಲೆಗಳ ಶಿಕ್ಷಕರು, ಶಾಲಾ ಮುಖ್ಯ ಶಿಕ್ಷಕರು ಎಸ್.ಡಿ.ಯಮ್.ಸಿ ಸದಸ್ಯರು ವಿಮುಕ್ತಿ ಸಿಬ್ಬಂದಿಗಳು ಭಾಗವಹಿಸಿದ್ದರು. ಶ್ರೀಮತಿ ಲವೀನಾ ಸ್ವಾಗತಿಸಿ, ಕು.ರೋಹಿಣಿ ವಂದಿಸಿ, ಕು.ಪೂರ್ಣಿಮ ಮೋನಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.