ಶಾಸಕ ಪೂಂಜ ಹಾಗೂ ಬಿಜೆಪಿಯವರಿಂದ ಹಾದಿ ತಪ್ಪಿಸುವ ತಂತ್ರ: ವಸಂತ ಬಂಗೇರ ಆರೋಪ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: 200 ದಿನಗಳಲ್ಲಿ 102 ಕೋಟಿ ಅನುದಾನ ಬೆಳ್ತಂಗಡಿ ಕ್ಷೇತ್ರಕ್ಕೆ ತಂದಿರುವುದಾಗಿ ಶಾಸಕರು ಹೇಳಿದ್ದಾರೆ. ಇಂದು ತಾಲೂಕಿನ ಜನತೆಯನ್ನು ಶಾಸಕ ಹರೀಶ್ ಪೂಂಜ ಹಾಗೂ ಬಿಜೆಪಿಯವರು ಹಾದಿ ತಪ್ಪಿಸುವ ತಂತ್ರ. ಜಿಲ್ಲೆಯಲ್ಲಿ8 ಶಾಸಕರಿದ್ದಾರೆ. ಇದರಲ್ಲಿ7ಬಿಜೆಪಿಯ ಶಾಸಕರು. ಅವರಿಗೆ ಬಾರದ ಅನುದಾನ ಬೆಳ್ತಂಗಡಿಗೆ ಬಂದಿದೆ ಎಂದರೆ ಇದು ಹಾಸ್ಯಾಸ್ಪದ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಡಿ.7 ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಪ್ರಸ್ತುತ ಶಾಸಕರು ತನ್ನದೆಂದು ಹೇಳಿಕೊಳ್ಳುತ್ತಿರುವ ಅನುದಾನಗಳು ಎಲ್ಲವೂ ನಾನು ಶಾಸಕನಾಗಿರುವಾಗ ಮಂಜೂರು ಗೊಂಡ ಕಾಮಗಾರಿಗಳಾಗಿವೆ. ಇದರ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ. ಈ ಕುರಿತು ಬಹಿರಂಗ ಚರ್ಚೆಗೂ ಸಿದ್ಧ ಎಂಬುದನ್ನು ನಾನು ಈಗಾಗಲೇ ತಿಳಿಸಿದ್ದೇನೆ. ಅನುದಾನ ಮಂಜೂರುಗೊಂಡಿರುವುದಕ್ಕೆ ಶಾಸಕರಲ್ಲಿ ದಾಖಲೆಗಳಿದ್ದಲ್ಲಿ ಅದನ್ನು ಅವರು ಬಿಡುಗಡೆಗೊಳಿಸಲಿ ಎಂದು ಸವಾಲು ಹಾಕಿದರು.
1978 ರಿಂದ 1982 ರ ತನಕ ಗಂಗಾಧರ ಗೌಡರು ಶಾಸಕರಾಗಿ, ಸಚಿವರಾಗಿ ಅನೇಕ ಕಾಮಗಾರಿಗಳನ್ನು ಮಂಜೂರು ಮಾಡಿದ್ದರು. ಅವರು ಮಾಡಿದ ಕಾಮಗಾರಿಯನ್ನು ನಾನು ಮಾಡಿದ್ದು ಎಂದು ನಾನು ಎಲ್ಲಿಯೂ ಹೇಳಿಲ್ಲ. 1989 ರಲ್ಲಿ ಅವರು ಎರಡನೇ ಬಾರಿ ಶಾಸಕರಾದರು ಆಗ ನಾನು ಮಾಡಿದ ಕೆಲಸವನ್ನು ಅವರು ತಾನು ಮಾಡಿದ್ದೆಂದು ಹೇಳಿಲ್ಲ. ಇದೇ ರೀತಿ 1999 ರಲ್ಲಿ ಪ್ರಭಾಕರ ಬಂಗೇರ ಶಾಸಕರಾದರು. ಅವರು ಕೂಡಾ ನಾನು ಮಂಜೂರು ಮಾಡಿದ್ದನ್ನು ತನ್ನದೆಂದು ಹೇಳಿಕೊಳ್ಳಲಿಲ್ಲ. ಇದು ರಾಜ್ಯದಲ್ಲಿರುವ ವ್ಯವಸ್ಥೆ. ಆದರೆ ಬೆಳ್ತಂಗಡಿ ತಾಲೂಕು ಮಾತ್ರ ವಿಚಿತ್ರವಾಗಿದೆ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ಬಿಜೆಪಿಯ 7 ಶಾಸಕರಿದ್ದಾರೆ. ಸಂಸದರಿದ್ದಾರೆ. ಅವರು ರಾಜ್ಯದಿಂದ ಒಂದೇ ಒಂದು ಪೈಸೆ ಅನುದಾನ ಬಂದಿಲ್ಲ ಎಂದು ಆರೋಪಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರಕ್ಕೆ ರೂ.50 ಕೋಟಿಯಷ್ಟು ಅನುದಾನ ಇನ್ನೂ ಬಂದಿಲ್ಲ, ಲೋಕೋಪಯೋಗಿ ಸಚಿವ ರೇವಣ್ಣ ಕ್ಷೇತ್ರಕ್ಕೂ ರೂ.50 ಕೋಟಿ ಮಂಜೂರಾಗಿಲ್ಲ.
ಆರು ಬಾರಿ ಶಾಸಕರಾದ ಅಂಗಾರ ಅವರು ಕೂಡಾ ತನ್ನ ಕ್ಷೇತ್ರಕ್ಕೆ ಬಂದ ಅನುದಾನ ಪ್ರಸ್ತಾಪಿಸಿಲ್ಲ. ಮುಖ್ಯ ಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರ ಕ್ಷೇತ್ರಕ್ಕಿಂತ ಓರ್ವ ಶಾಸಕನ ಕ್ಷೇತ್ರಕ್ಕೆ ಎಲ್ಲರಿಗಿಂತ ಹೆಚ್ಚು ಅನುದಾನ ಸರಕಾರ ನೀಡುತ್ತದೆಯೇ, 102 ಕೋಟಿ ತರಲು ಶಾಸಕರು ಸ್ಪರ್ಗದಿಂದ ಇಳಿದು ಬಂದಿದ್ದಾರೆಯೇ ಅಥವಾ ಏನಾದರೂ ಚಮತ್ಕಾರ ಮಾಡಿದ್ದಾರೆಯೇ ಎಂದು ವ್ಯಂಗವಾಡಿ, ಇದೇ ರೀತಿ ಬಿಜೆಪಿ ಚುನಾವಣೆ ಸಂದರ್ಭ ಅಪಪ್ರಚಾರ ಮಾಡಿ ಜನರನ್ನು ಮಂಕು-ಮರುಳು ಮಾಡುವ ಕೆಲಸವನ್ನು ಮಾಡಿದೆ ಎಂದು ಆಪಾದಿಸಿದರು. ಲೋಕೋಪಯೋಗಿ ಇಲಾಖೆಯಿಂದ ನೇತ್ರಾವತಿಯಿಂದ ಧರ್ಮಸ್ಥಳದವರೆಗೆ ಮಂಜೂರಾಗಿರುವ ರಸ್ತೆ ಕಾಮಗಾರಿಯನ್ನು ಧರ್ಮಸ್ಥಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಸಭೆ ನಡೆಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಮೇರೆಗೆ ಬಿಡುಗಡೆಯಾಗಿದೆಯೇ ಹೊರತು ಹರೀಶ್ ಪೂಂಜರ ಪ್ರಸ್ತಾಪಕ್ಕಲ್ಲ. ಶಾಸಕ ಹರೀಶ್ ಪೂಂಜ ಮಾಡಿರುವ ಪ್ರಸ್ತಾಪಕ್ಕೆ ರಾಜ್ಯ ಸರಕಾರ ಒಂದು ಪೈಸೆಯನ್ನೂ ಬಿಡುಗಡೆ ಮಾಡಿಲ್ಲ ಇದಕ್ಕೆ ದಾಖಲೆ ಇದೆ ಎಂದು ತಿಳಿಸಿದರು.
ತಾನು ಶಾಸಕನಾಗಿದ್ದಾಗ ಲೋಕೋಪಯೋಗಿ, ಪ್ರವಾಸೋಧ್ಯಮ, ಮೆಸ್ಕಾಂ, ಪ.ಜಾತಿ ಕಾಲನಿ, ಟಾಸ್ಕ್‌ಪೋರ್ಸ್, ಸಣ್ಣ ನೀರಾವರಿ, ಪಶುಭಾಗ್ಯ, ಕಂದಾಯ ಸೇರಿದಂತೆ ಅನೇಕ ಕಾಮಗಾರಿಗಳನ್ನು ಮಾಡಿಸಿದ್ದೇನೆ. 01/03/2018 ಕ್ಕೆ ಅನೇಕ ಕಾಮಗಾರಿಗಳು ಮಂಜೂರುಗೊಂಡಿದೆ. ಇದರಲ್ಲಿ ಕೆಲವು ಕಾಮಗಾರಿಗಳಿಗೆ ಚುನಾವಣೆ ಬಂದದ್ದರಿಂದ ಟೆಂಡರ್ ಓಪನ್ ಆಗದಂತೆ ತಡೆಯಾಜ್ಞೆ ಬಂತು. ಚುನಾವಣೆ ಮುಗಿದ ಬಳಿಕ ಇದು ಓಪನ್ ಆಗಿ ಈಗ ಕಾಮಗಾರಿ ಆರಂಭಗೊಂಡಿದೆ. ಆದರೆ ಹರೀಶ್ ಪೂಂಜ ಶಾಸಕರಾಗಿದ್ದು 15/05/2018 ಕ್ಕೆ. ಅವರು ಶಾಸಕರಾಗುವುದಕ್ಕೆ ಮೊದಲೇ ಈ ಎಲ್ಲಾ ಕಾಮಗಾರಿಗಳು ಮಂಜೂರುಗೊಂಡಿದೆ ಎಂದು ಬಂಗೇರ ವಿವರಿಸಿದರು. ಕೊಲ್ಲಿ ದೇವಸ್ಥಾನಕ್ಕೆ ರೂ.10 ಲಕ್ಷ ಮಂಜೂರಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಇದು ಮಂಜೂರಾಗಿಲ್ಲ, ಮಂಜೂರಾತಿ ಹಂತದಲ್ಲಿದೆ. ಮೊನ್ನೆ ನಾನು ದೇವಸ್ಥಾನಕ್ಕೆ ಹೋದಾಗ ನನಗೆ ಮನವಿ ನೀಡಿದ್ದಾರೆ. ಕೊಲ್ಲಿ ದೇವಸ್ಥಾನ ರಸ್ತೆ ರೂ.30 ಲಕ್ಷದಲ್ಲಿ ಕಾಂಕ್ರೀಟೀಕರಣ ಮಾಡಿಸುತ್ತೇನೆ. ಕಾಜೂರು-ಕೊಲ್ಲಿ ರೂ.2 ಕೋಟಿಯ ಸೇತುವೆ ಮಾಡಿಸಿದ್ದೇನೆ. ಸಂಪರ್ಕ ರಸ್ತೆಗೂ ರೂ.1.20 ಕೋಟಿ ಮಂಜೂರು ಮಾಡಿಸಿದ್ದು, ಅದು ಈಗ ಡಾಮರೀಕರಣ ಆಗುತ್ತಿದೆ ಎಂದು ತಿಳಿಸಿದರು. ಶಾಸಕ ಪೂಂಜ ಮತ್ತು ಬಿಜೆಪಿ ಅಧ್ಯಕ್ಷ ಜಯಂತ ಕೋಟ್ಯಾನ್ ಪ್ರಚಾರ ಮಾಡುತ್ತಿರುವ ವಿಚಾರಗಳೆಲ್ಲ ಸತ್ಯಾಂಶದಿಂದ ಕೂಡಿದ್ದರೆ ಅವರೊಂದಿಗೆ ಚರ್ಚೆಗೆ ಸಿದ್ಧನಿದ್ದೇನೆ. ಚರ್ಚೆಗೆ ವೇದಿಕೆ ಸಿದ್ದ ಮಾಡಲಿ ಜನತೆಗೆ ನೈಜಾಂಶ ತಿಳಿಯಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಶ್ರೀನಿವಾಸ ಕಿಣಿ, ಜಿ.ಪಂ ಸದಸ್ಯರಾದ ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ನಮಿತಾ, ತಾ.ಪಂ ಸದಸ್ಯ ಪ್ರವೀಣ ಗೌಡ, ನ.ಪಂ ಸದಸ್ಯರಾದ ಜಗದೀಶ್ ಡಿ, ಜನಾರ್ದನ, ಮುಸ್ತರ್‌ಜಾನ್, ರಾಜಶ್ರೀ ರಮಣ್, ಮುಖಂಡರಾದ ಬಿ.ಕೆ ವಸಂತ, ಆಶ್ರಫ್ ನೆರಿಯ, ನವೀನ್ ರೈ ಬಾರ್ಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.