100ಮೀ. ಹರ್ಡಲ್ಸ್ ಸ್ಪರ್ಧೆ: ಲಾಯಿಲದ ಚಂದ್ರಿಕಾ ರಾಜ್ಯಮಟ್ಟಕ್ಕೆ

ಬೆಳ್ತಂಗಡಿ: ಇಂಡಿಯನ್ ಮಸ್ಟರ್ ಅಥ್ಲೆಟಿಕ್ ಇದರ ಪ್ರಯುಕ್ತ ಜಿಲ್ಲಾ ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ಲಾಯಿಲ ಗ್ರಾಮದ ಅಂಕಾಜೆ ನಿವಾಸಿ ಚಂದ್ರಿಕಾ ಭಾಗವಹಿಸಿ, 100ಮೀ. ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಮಂಗಳೂರು ಲೇಡಿಹಿಲ್ ಪಾಂಪೆ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಕೋಚ್ ಮಾಸ್ಟರ್ ದಾಮೋದರ ಗೌಡ ರವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
ಇವರು ಲಾಯಿಲ ಗ್ರಾಮದ ಅಂಕಾಜೆ ನಿವಾಸಿ ಶ್ರೀಮತಿ ಯಶೋಧ ಮತ್ತು ದಿ| ಮೋಹನ್ ಕೋಟ್ಯಾನ್ ದಂಪತಿ ಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.