ಪೆರಾಡಿ: ಧ್ವಜಕಟ್ಟೆ ಉದ್ಘಾಟನೆ-ಹಿಂದೂ ಸಂಗಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಹಿಂದೂಗಳು ಸಹಿಷ್ಟುತೆಯುಳ್ಳವರು. ಅಸಹಿಷ್ಟುತೆಯನ್ನು ನಾವು ಯಾವತ್ತೂ ಸಹಿಸುವುದಿಲ್ಲ. ಹಿಂದೂ ಧರ್ಮದ ಪ್ರತೀಕ, ಅತ್ಯಂತ ಪಾವಿತ್ರ್ಯತೆವುಳ್ಳ ಭಗವಾಧ್ವಜವನ್ನು ಹಾರಾಡಿಸಲು ಭಾರತದಲ್ಲಿ ಯಾರ ಅನುಮತಿಯೂ ಬೇಕಾಗಿಲ್ಲ. ಪ್ರತೀ ಗ್ರಾಮಗಳಲ್ಲಿ ಮಸೀದಿ, ಮದರಸಗಳಲ್ಲಿ ಅದನ್ನು ಹಾರಾಡಿಸುವ ತಾಕತ್ತು ಹಿಂದೂ ಸಮಾಜಕ್ಕಿದೆ ಎಂದು ಮಂಗಳೂರು ಭಜರಂಗದಳದ ವಿಭಾಗ ಸಹಸಂಚಾಲಕ ರಘು ಸಕ್ಲೇಶಪುರ ಸವಾಲು ಹಾಕಿದರು.
ವಿಶ್ವ ಹಿಂದೂ ಪರಿಷತ್ ಭಜರಂಗದಳ ವೇಣೂರು ಪ್ರಖಂಡ ಹಾಗೂ ಶ್ರೀ ಅಯ್ಯಪ್ಪ ಘಟಕ ಪೆರಾಡಿ ಸಂಯೋಜನೆಯಲ್ಲಿ ಡಿ.9 ರಂದು ಬೆಳ್ತಂಗಡಿ ತಾಲೂಕಿನ ಪೆರಾಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಧ್ವಜಕಟ್ಟೆ ಉದ್ಘಾಟನೆ ಹಾಗೂ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗೈದು, ಕೇಸರಿ ದೇಶದ ರಾಷ್ಟ್ರಧ್ವಜ ಆಗಬೇಕೆಂದು ಅಂದು ಧ್ವಜಸಮಿತಿ ವರದಿ ನೀಡಿತ್ತು. ಆದರೆ ಪ್ರಧಾನಿಯಾಗಿದ್ದ ನೆಹರುರವರು ಅದನ್ನು ತಿರಸ್ಕರಿಸಿದರು. ರಾಮಮಂದಿರ, ದತ್ತಪೀಠಕ್ಕೆ ಹೋರಾಟ ಮಾಡಬೇಕಾದ ಅನಿವಾರ್ಯತೆಯಲ್ಲಿದ್ದ ನಮಗೆ ಇಂದು ಭಗವಾಧ್ವಜದ ಹಾರಾಟಕ್ಕೂ ಹೋರಾಟ ಮಾಡಬೇಕಾಗಿ ಬಂದಿರುವುದು ಖೇದಕರ. ಮುಂದಿನ ೧೫ ದಿನಗಳಳೊಳಗೆ ಮತ್ತೆ ಅದೇ ಕಟ್ಟೆಯಲ್ಲಿ ಭಗವಾಧ್ವಜವನ್ನು ಹಾರಾಡಿಸಿಯೇ ಸಿದ್ದ ಎಂದರು.
ಭಜರಂಗದಳದ ರಾಜ್ಯ ದಕ್ಷಿಣ ಪ್ರಾಂತ್ಯ ಸಂಚಾಲಕ ಸುನಿಲ್ ಕೆ.ಆರ್. ನೂತನ ಧ್ವಜಕಟ್ಟೆಯನ್ನು ಉದ್ಘಾಟಿಸಿದರು. ಪೆರಾಡಿ ವಿ.ಹಿಂ.ಪ.ನ ಅಧ್ಯಕ್ಷ ಸುಂದರ ಡ್ರೈವರ್ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಜಿಲ್ಲಾ ವಿ.ಹಿಂ.ಪ. ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ವಿ.ಹಿಂ.ಪ. ವೇಣೂರು ಪ್ರಖಂಡದ ಕಾರ್ಯದರ್ಶಿ ಸುನಿಲ್ ಕುಮಾರ್ ಇದ್ದರು.
ಭಜರಂಗದಳ ವೇಣೂರು ಪ್ರಖಂಡದ ಅಧ್ಯಕ್ಷ ರಾಮ್‌ಪ್ರಸಾದ್ ಮರೋಡಿ ಪ್ರಾಸ್ತಾವಿಸಿ, ಸ್ವಾಗತಿಸಿದರು. ನವೀನ್ ನೆರಿಯ ಕಾರ್ಯಕ್ರಮ ನಿರೂಪಿಸಿ, ಯಶೋಧರ ಆಚಾರ್ಯ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.