ಮನೆ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆ ಆರೋಪ : ತನಿಖೆ ವೇಳೆ ದೂರುದಾರಿಗೆ ಬಿಸಿನೀರು ಎರಚಿ ಹಲ್ಲೆ

Advt_NewsUnder_1
Advt_NewsUnder_1
Advt_NewsUnder_1
ಬಾಲ ಸುಬ್ರಹ್ಮಣ್ಯ ಭಟ್
ವಸಂತಿ
ವಿನುತಾ ರಜತ ಗೌಡ

ಬೆಳ್ತಂಗಡಿ: ಬಸವ ವಸತಿ ಯೋಜನೆಯಲ್ಲಿ ನಿಗಮದ ನಿಯಮವನ್ನು ಉಲ್ಲಂಘಿಸಿ ಮನೆ ನಿರ್ಮಿಸಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ರೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ತನಿಖೆಗೆ ಹೋದ ಸಂದರ್ಭದಲ್ಲಿ ದೂರುದಾರರ ಮೇಲೆ ಬಿಸಿನೀರು ಎರಚಿ ಹಲ್ಲೆ ನಡೆಸಿದ ಘಟನೆ ಡಿ. 4ರಂದು ಉಜಿರೆ ಗ್ರಾಮದ ಮಲೆಬೆಟ್ಟು ಎಂಬಲ್ಲಿ ನಡೆದಿದೆ.
ಘಟನೆಯಿಂದ ಗಾಯಗೊಂಡ ಉಜಿರೆ ಬೊಳಂಬಿ ನಿವಾಸಿ ಬಾಲ ಸುಬ್ರಹ್ಮಣ್ಯ ಭಟ್ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2013-14 ನೇ ಸಾಲಿನಲ್ಲಿ ಉಜಿರೆ ಗ್ರಾ.ಪಂ ವ್ಯಾಪ್ತಿಯ ಮಲೆಬೆಟ್ಟು ನಿವಾಸಿ ವಸಂತಿ ಕೋಂ ನಾರ್ಣಪ್ಪ ಗೌಡ ಎಂಬವರಿಗೆ ಬಸವ ವಸತಿ ಯೋಜನೆ ಯಲ್ಲಿ ಮನೆ ಮಂಜೂರಾಗಿತ್ತು. ಈ ಮನೆಯ ನಿರ್ಮಾಣ ಸರಕಾರದ ಮಿತಿಗಿಂತ ದೊಡ್ಡದಿದೆ ಎಂದು ಆರೋಪಿಸಿ ಉಜಿರೆಯ ಬೊಳಂಬಿ ನಿವಾಸಿ ಬಾಲಸುಬ್ರಹ್ಮಣ್ಯ ಭಟ್ ರಾಜೀವ ಗಾಂಧಿ ವಸತಿ ನಿಗಮಕ್ಕೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ನಿಗಮ ತಾ.ಪಂ.ಗೆ ಆದೇಶ ನೀಡಿದ್ದರಿಂದ ಡಿ.4ರಂದು ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಕುಸುಮಾಧರ್, ತಾ.ಪಂದಲ್ಲಿ ವಸತಿ ಯೋಜನೆ ನಿರ್ವಹಿಸುತ್ತಿರುವ ಶ್ರೀಧರ ಹೆಗ್ಡೆ, ಉಜಿರೆ ಗ್ರಾ.ಪಂ ಕಾರ್ಯದರ್ಶಿ ಮಂಜು, ಗುಮಾಸ್ತ ಉಮೇಶ್ ಅವರು ಖಾಸಗಿ ಜೀಪಿನಲ್ಲಿ ತನಿಖೆಗೆ ತೆರಳಿದ್ದರು. ತನಿಖೆ ವೇಳೆ ದೂರುದಾರರು ಸ್ಥಳದಲ್ಲಿರಬೇಕೆಂಬ ಹಿನ್ನೆಲೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ಅವರನ್ನು ಕರೆಕೊಂಡು ಹೋಗಿದ್ದರು.
ಅಧಿಕಾರಿಗಳು ಮನೆ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಮನೆಯಲ್ಲಿದ್ದ ಉಜಿರೆ ಗ್ರಾ.ಪಂ ಉಪಾಧ್ಯಕ್ಷೆ ವಿನುತಾ ರಜತ ಗೌಡ ಅವರು ಬಿಸಿನೀರು ಎರಚಿದರೆಂದು ಗಾಯಾಳು ಸುಬ್ರಹ್ಮಣ್ಯ ಭಟ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಈ ನಡುವೆ ವಿನುತಾ ರಜತ ಗೌಡ, ಅವರ ಅತ್ತೆ ವಸಂತಿ ಅವರು ಕೂಡಾ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರಿಗೆ ಪ್ರತಿ ದೂರು ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಕಿರುಕುಳ ನೀಡಿದ ಬಗ್ಗೆ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.