ಮೆದುಳಿನ ರಕ್ತಸ್ರಾವ: ಓಡಿಲ್ನಾಳದಲ್ಲಿ ಬಾಲಕನ ಸಾವು

ಓಡಿಲ್ನಾಳ: ಇಲ್ಲಿಯ ಮೂಡುಮನೆ ನಿವಾಸಿ ಶ್ರೀನಿವಾಸ ಅಮ್ಮುಣ್ಣಾಯ ರವರ ಪುತ್ರ ಶೀಕರ(14.ವ) ರವರು ಡಿ.2 ರಂದು ಮೆದುಳಿನ ರಕ್ತಸ್ರಾವದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಶ್ರೀಖರ ರವರು ಹಳೆಕೋಟೆ ವಾಣಿ ಆಂಗ್ಲಮಾಧ್ಯಮ ಶಾಲೆಯ ೯ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಇವರು ಒಂದು ತಿಂಗಳಿನಿಂದ ಹಿಂದೆಯೇ ತಲೆನೂವು ಸಮಸ್ಯೆಯಿಂದ ಬಳಲುತ್ತಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಿ.1 ರಂದು ಬೆಳಿಗ್ಗೆ ಶಾಲೆಗೆ ಹೊರಡುವ ಸಂದರ್ಭದಲ್ಲಿ ಇವರಿಗೆ ವಾಂತಿ ಹಾಗೂ ತಲೆಸುತ್ತು ಬಂದ ಕಾರಣ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಡಿ.2 ರಂದು ಮೃತಪಟ್ಟಿದ್ದಾರೆ.
ಮೃತರು ತಂದೆ ಶ್ರೀನಿವಾಸ ಅಮ್ಮುಣ್ಣಾಯ, ತಾಯಿ ರಮಾ, ಸಹೋದರ ಶ್ರೀವತ್ಸ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.