ಡಿ.12-14 : ಬಳ್ಳಮಂಜಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಷಷ್ಠೀ ಮಹೋತ್ಸವ

ಮಚ್ಚಿನ: ಇಲ್ಲಿಯ ಮಡಂತ್ಯಾರು ಸಮೀಪವಿರುವ ತುಳುನಾಡಿನ ಪ್ರಸಿದ್ಧ ನಾಗಕ್ಷೇತ್ರ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜ. ಈ ಕ್ಷೇತ್ರದ ಸೊಬಗಿಗೆ ತಕ್ಕಂತೆ ಇಲ್ಲಿ ಶ್ರೀ ಅನಂತೇಶ್ವರ ದೇವರ ದಿವ್ಯ ಸನ್ನಿಧಿ ಇದ್ದು, ಭಕ್ತ ಜನರ ಇಷ್ಟಾರ್ಥವನ್ನು ಈಡೇರಿಸುವ ಶ್ರದ್ಧಾ ಕೇಂದ್ರವಾಗಿರುತ್ತದೆ.
ತುಳುನಾಡಿನ ಇತಿಹಾಸದ ಪ್ರಕಾರ ಬಳ್ಳಮಂಜ ಎಂದರೆ ಬೆಳ್ಳಿಯ ಹುತ್ತ ಎಂದು ವ್ಯಾಖ್ಯಾನಿಸುತ್ತಾರೆ. ಇಲ್ಲಿ ಬ್ರಹ್ಮಕಲಶ ನಡೆದು ಈ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಾ ಬಂದಿದೆ. ಕಳೆದ ವರ್ಷ ಇಲ್ಲಿಯ ದೇವಸ್ಥಾನಕ್ಕೆ ಹೊರ ಸುತ್ತು ಪೌಳಿ ಹಾಗೂ ರಾಜಗೋಪುರಕ್ಕೆ ಶಿಲಾನ್ಯಾಸ ಕೈಗೊಳ್ಳಲಾಯಿತು. ಊರ ಹಾಗೂ ಪರವೂರ ಭಕ್ತಾಭಿಮಾನಿಗಳ ಉದಾರ ದಾನಿಗಳಿಂದ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ನಡೆಯುತ್ತಾ ಬಂದಿದೆ.
ಕ್ಷೇತ್ರದ ಕೆಲಸ ಕಾರ್ಯಗಳು ಬಾಕಿ ಇದ್ದು ದೇವಳದ ಆಡಳಿತ ಮಂಡಳಿಯೂ ಅನುದಾನದ ನಿರೀಕ್ಷೆಯಲ್ಲಿದೆ. ಸಂಪೂರ್ಣ ಶಿಲಾಮಯ ಹೊರ ಸುತ್ತು ಪೌಳಿ ಮತ್ತು ರಾಜಗೋಪುರವು ಮೇಷ ಜಾತ್ರೆಯ ಸಂದರ್ಭ ಲೋಪಾರ್ಪಣೆಗೊಳ್ಳಲಿದೆ ಹಾಗೂ ಇದೇ ಬರುವ ಡಿ.12 ರಿಂದ ಡಿ.14ರವರೆಗೆ ಪ್ರತೀ ವರ್ಷದಂತೆ ನಡೆಯುವ ಷಷ್ಠೀ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.
ಡಿ.12 ರಂದು ಕೊಪ್ಪರಿಗೆ ಮುಹೂರ್ತ, ಅಂಗಪ್ರದಕ್ಷಿಣೆ, ರಾತ್ರಿ ಪಂಚಮಿ ಉತ್ಸವ, ಡಿ.13 ರಂದು ಬೆಳಿಗ್ಗೆ ಷಷ್ಠೀ ಉತ್ಸವ ಪ್ರಾರಂಭ ಗೊಂಡು, ಮಧ್ಯಾಹ್ನ 11ಕ್ಕೆ ಬ್ರಹ್ಮರಥೋತ್ಸವ ಮಹಾಪೂಜೆ, ಮಹಾಅನ್ನಸಂತರ್ಪಣೆ, ರಾತ್ರಿ ದರ್ಶನ ಬಲಿ ಉತ್ಸವ ಡಿ.14 ರಂದು ಮಹಾಸಂಪ್ರೇಕ್ಷಣೆ ನಡೆಯಲಿದೆ ಎಂದು ಕ್ಷೇತ್ರದ ಆನುವಂಶಿಯ ಆಡಳಿತ ಮೊಕ್ತೇಸರ ಡಾ| ಯಂ. ಹರ್ಷ ಸಂಪಿಗೆತ್ತಾಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.