ಡಿ.2ರಿಂದ ಧರ್ಮಸ್ಥಳ ಲಕ್ಷದೀಪೋತ್ಸವ ಡಿ.5 ಸರ್ವಧರ್ಮ – ಡಿ.6ಸಾಹಿತ್ಯ ಸಮ್ಮೇಳನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಕರ್ನಾಟಕದ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷದಂತೆ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಡಿ.2 ರಿಂದ ಡಿ.6ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಡಿ.2ರಂದು ವಸ್ತುಪ್ರದರ್ಶನ ಉದ್ಘಾಟನೆ ಮತ್ತು ಹೊಸಕಟ್ಟೆ ಉತ್ಸವ, ಡಿ.3ರಂದು ಕೆರೆಕಟ್ಟೆ ಉತ್ಸವ, ಡಿ.4 ರಂದು ಮಧ್ಯಾಹ್ನ 3ರಿಂದ ಲಲಿತಕಲಾ ಗೋಷ್ಠಿಯಲ್ಲಿ ಪ್ರಕಾಶ್ ದೇವಾಡಿಗರಿಂದ ಸ್ಯಾಕ್ಸೋಫೋನ್, ಕು. ಅದಿತಿ ಬಿ. ಪ್ರಹ್ಲಾದ್‌ರಿಂದ ಸುಗಮ ಸಂಗೀತ, ಬಳಿಕ ಭರತನಾಟ್ಯ ಮತ್ತು ಸಮೂಹ ಭರತನಾಟ್ಯ, ರಾತ್ರಿ ಲಲಿತೋದ್ಯಾನ ಉತ್ಸವ ಜರುಗಲಿದೆ.
ಸರ್ವಧರ್ಮ ಸಮ್ಮೇಳನ- ಡಿ.5ರಂದು ಅಮೃತ ವರ್ಷಿಣಿ ಸಭಾ ಭವನದಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನವನ್ನು ಗುಜರಾತ್ ದ್ವಾರಕ ಸೂರ್ಯಪೀಠದ ಜಗದ್ಗುರು ಶ್ರೀ ಕೃಷ್ಣದೇವನಂದಗಿರಿ ಮಹಾರಾಜ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ ಎಂ. ಮಮ್ತಾಜ್ ಆಲಿ ವಹಿಸಲಿದ್ದಾರೆ. ಜೆ.ಆರ್. ಲೋಬೋ, ಇಬ್ರಾಹಿಂ ಸುತಾರ, ಶ್ರೀಧರ್ ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಲಿದ್ದಾರೆ. ಬಳಿಕ ಕಂಚಿಮಾರುಕಟ್ಟೆ ಉತ್ಸವ ನಡೆಯಲಿದೆ.
ಸಾಹಿತ್ಯ ಸಮ್ಮೇಳನ- ಡಿ.೬ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನವನ್ನು ವಿ.ಆರ್.ಎಲ್. ಸಮೂಹ ಸಂಸ್ಥೆಯ ಅಧ್ಯಕ್ಷ ವಿಜಯ ಸಂಕೇಶ್ವರ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಖ್ಯಾತ ವಿಮರ್ಶಕ ಪ್ರೊ. ಟಿ.ಪಿ.
ಅಶೋಕ್ ವಹಿಸಲಿದ್ದಾರೆ. ಡಾ. ಬಿ.ಆರ್. ರವಿಕಾಂತೇ ಗೌಡ, ಎಂ. ಅಬ್ದುಲ್ ರೆಹಮಾನ್ ಪಾಷ, ಶ್ರೀಮತಿ ಕವಿತಾ ಅಡೂರ್ ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಲಿದ್ದಾರೆ. ಬಳಿಕ ಗೌರಿಮಾರುಕಟ್ಟೆ ಉತ್ಸವ ನಡೆಯಲಿದೆ. ಡಿ.೭ರಂದು ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ಹಾಗೂ ಶ್ರೀ ವೇಣೀ ಸುಬ್ರಹ್ಮಣ್ಯ ಭಟ್ ಮತ್ತು ಬಳಗ ಕಾರ್ಕಳ ಇವರಿಂದ `ಯಕ್ಷ-ಜಿನ-ಗಾನ- ವೈಭವ ನಡೆಯಲಿದೆ. ವಸ್ತು ಪ್ರದರ್ಶನ ಮಂಟಪ ಮತ್ತು ಸಮ್ಮೇಳನ ಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.