ಡಿ. 5: ಎಂಎಲ್‌ಸಿ ಹರೀಶ್ ಕುಮಾರ್ ಕಛೇರಿ “ಪ್ರಿಯದರ್ಶಿನಿ” ಉದ್ಘಾಟನೆ

ಬೆಳ್ತಂಗಡಿ : ಇಲ್ಲಿನ ಮಿನಿ ವಿಧಾನ ಸೌಧ ಕಟ್ಟಡದ ಮೊದಲ ಮಹಡಿಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ಅಧಿಕೃತ ಜನಸಂಪರ್ಕ ಕಛೇರಿ ಪ್ರಿಯದರ್ಶಿನಿ ಇದರ ಉದ್ಘಾಟನೆ ಡಿ. 5 ಬುಧವಾರದಂದು ಪೂರ್ವಾಹ್ನ ಗಂಟೆ 10 ಕ್ಕೆ ನಡೆಯಲಿದೆ. ಧರ್ಮಸ್ಥಳ ನಿತ್ಯಾನಂದನಗರ ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು, ಬೆಳ್ತಂಗಡಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ. ಫಾ| ಬಿಷಪ್ ಲಾರೆನ್ಸ್ ಮುಕ್ಕುಯಿ, ಉಸ್ತುವಾರಿ ಸಚಿವರಾದ ಯು.ಟಿ ಖಾದರ್, ಮಾಜಿ ಸಚಿವ ಬಿ. ರಮಾನಾಥ ರೈ ಮತ್ತು ಕೆ. ಗಂಗಾಧರ ಗೌಡ, ಮಾಜಿ ಶಾಸಕ ಕೆ. ವಸಂತ ಬಂಗೇರ, ಹಾಜಿ ಬಿ. ಉಮರ್‌ಕುಂಞಿ ಮುಸ್ಲಿಯಾರ್ ಇವರುಗಳು ದೀಪಬೆಳಗಿಸಿ ನೂತನ ಕಛೇರಿ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಹಿತೈಷಿಗಳು ಭಾಗವಹಿಸಬೇಕೆಂದು ಎಂಎಲ್‌ಸಿ ಕೆ. ಹರೀಶ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.