ಗ್ರಾ.ಪಂ. ಮಿತ್ತಬಾಗಿಲು : ಮಹಿಳಾ ಗ್ರಾಮ ಸಭೆ

Advt_NewsUnder_1
Advt_NewsUnder_1
Advt_NewsUnder_1

ಮಿತ್ತಬಾಗಿಲು: ಮಿತ್ತಬಾಗಿಲು ಪಂಚಾಯತು ವ್ಯಾಪ್ತಿಯ 2018-19ನೇ ಸಾಲಿನ ಮಹಿಳಾ ಗ್ರಾಮ ಸಭೆಯು ಪಂಚಾಯತು ಉಪಾಧ್ಯಕ್ಷೆ ಶ್ರೀಮತಿ ವನಿತಾ ಸಿವರ ಅಧ್ಯಕ್ಷತೆಯಲ್ಲಿ ಅ.23ರಂದು ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಕಲಾಮಂದಿರದಲ್ಲಿ ನಡೆಯಿತು. ವೇದಿಕೆಯಲ್ಲಿ ಪಂಚಾಯತು ಅಧ್ಯಕ್ಷೆ ನಾರಾಯಣ ಪಾಟಾಳಿ, ಅಭಿವೃದ್ಧಿ ಅಧಿಕಾರಿ ದೇವರಾಜೇಗೌಡ ಹೆಚ್.ಡಿ, ಕಾರ್ಯದರ್ಶಿ ಮಾರುತಿ ಬಿ.ಎಚ್, ಪಂಚಾಯತು ಸದಸ್ಯರು ಇಲಾಖಾಧಿಕಾರಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ತಾ.ಪಂ ನಿಂದ ಸಮಾಲೋಚಕರು ಆರ್ಥಿಕ ವಿಭಾಗದ ಶ್ರೀಮತಿ ಉಷಾ ನಾಯಕ್ ಆಗಮಿಸಿದ್ದರು. ಮಹಿಳೆಯರಿಗೆ ಆಗುತ್ತಿರುವ ದೌಜನ್ಯ, ಮಹಿಳೆಯರ ಅಪೌಷ್ಠಿಕತೆ ಮತ್ತು ರಕ್ತಹೀನತೆ, ಮಕ್ಕಳ ರಕ್ಷಣೆ, ಪೋಷಣೆ, ಮಹಿಳೆಯರ ರಾಜಕೀಯ ಮತ್ತು ಸ್ವಸಹಾಯ ಸಂಘದ ಮಹಿಳೆಯರ ಆರ್ಥಿಕ ಸುಧಾರಣೆ ಮತ್ತು ಸಬಲೀಕರಣದ ಹಾಗೂ ಬ್ಯಾಂಕ್ ಸಾಲಗಳ ಬಗ್ಗೆ ವಿವರಣೆಗಳನ್ನು ನೀಡಿದರು. ಮಹಿಳೆಯರಿಂದ ಬ್ಯಾಂಕ್ ಬಳಿ ಹೋದರೆ ಸಾಲ ನೀಡುವುದಿಲ್ಲ ನಾನಾ ಕಾರಣದಿಂದ ದೂರವಿಡುತ್ತಾರೆ ಎಂದು ನೋವನ್ನು ತೊಡಿಕೊಂಡರು. ಬ್ಯಾಂಕಿನಿಂದ ಸಾಲ ನೀಡದಿದ್ದರೆ ನನ್ನ ಗಮನಕ್ಕೆ ತನ್ನಿ. ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡುವ ಎಂದು ಉಷಾ ನಾಯಕ್ ಮಹಿಳೆಯರಿಗೆ ಸ್ಪೂರ್ತಿ ನೀಡಿದರು.
ಮಹಿಳಾ ಗ್ರಾಮ ಸಭೆಯಲ್ಲಿ ಅಂಗನವಾಡಿ ಕೇಂದ್ರ ಗ್ರೈಂಡರ್ ಮತ್ತು ಊಟದ 7 ತಟ್ಟೆ ನಾಪತ್ತೆಯಾದ ಪಸ್ತಾಪ ಮಹಿಳೆಯರು ಎತ್ತಿದರು. ಇದಕ್ಕೆ ಉತ್ತರಿಸಿದ ಮಕ್ಕಳ ಮತ್ತು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮಾತಾಡಿ ದೂರನ್ನು ನೀಡಿದರೆ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಇತ್ತರು. ಸಭೆ ಮುಗಿದ ನಂತರ ಮಕ್ಕಳು ಮತ್ತು ಶಿಶು ಅಭವೃದ್ಧಿ ಇಲಾಖೆಯ ಮೇಲ್ವಿಚಾರಕಿ, ಪಂಚಾಯತು ಸದಸ್ಯರು ಮಹಿಳಾ ಗ್ರಾಮಸ್ಥರು ಅಂಗನವಾಡಿಗೆ ಬೇಟಿ ನೀಡಿದರು.
ಮಹಿಳಾ ಗ್ರಾಮ ಸಭೆಯಲ್ಲಿ ಬಂದ ಬೇಡಿಕೆಗಳನ್ನು ಪಂ. ಅಧ್ಯಕ್ಷ ನಾರಾಯಣ ಪಾಟಾಳಿ ಈಡೇರಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದರು.  ಸ್ಥಳೀಯ ಶಾಲಾ ಶಿಕ್ಷಕಿ ಮಮತ ನಿರೂಪಿಸಿ, ಅಂಗನವಾಡಿ ಕಾರ್ಯಕರ್ತೆ ಕವಿತಾ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.