ನಾವೂರು ಗೋಪಾಲಕ್ರಷ್ಣ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ

Advt_NewsUnder_1
Advt_NewsUnder_1
Advt_NewsUnder_1

ನಾವೂರು: ಇಲ್ಲಿಯ ಶ್ರೀ ಗೋಪಾಲಕ್ರಷ್ಣ ದೇವಸ್ಥಾನದಲ್ಲಿ  ಕಾರ್ತಿಕ ಮಾಸದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ನ.23 ರಂದು ಜರುಗಿತು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ  ಜಗದೀಶ್ ಪ್ರಸಾದ್ , ಜೀರ್ಣೋದ್ದಾರ ಸಮಿತಿ  ಅಧ್ಯಕ್ಷ  ಉಮೇಶ್ ಹತ್ಯಡ್ಕ, ತಾ.ಪಂ.ಉಪಾಧ್ಯಕ್ಷೆ ವೇದಾವತಿ , ಡಾ| ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು. ಈ ಸಮಯದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಡಾ|ಪ್ರದೀಪ್, ಯೋಗ ನಿದ್ರೆಯಿಂದೆದ್ದ ಶ್ರೀ ಕ್ರಷ್ಣ ಶಿವನೊಂದಿಗೆ ಭೂ ಸಂಚಾರ ಮಾಡುವ ಈ ಸಮಯವೇ ಕಾರ್ತಿಕ ಮಾಸ ಎಂಬ ಪ್ರತೀತ ಇದ್ದು, ಈ ಸಂದರ್ಭದಲ್ಲಿ ಭಕ್ತರು ಶ್ರೀ ಕ್ರಷ್ಣನಿಗೆ ನಂದಾದೀಪ ಹಚ್ಚಿ ವಿಶೇಷವಾಗಿ ಪೂಜಿಸುತ್ತಾರೆ ಎಂದು ಕಾರ್ತಿಕ ಮಾಸದ ಮಹತ್ವವನ್ನು ವಿವರಿಸಿದರು.  ಈ ಸಂದರ್ಭದಲ್ಲಿ ತಾಲೂಕು ಕುಲಾಲ ಸಂಘದ ಅದ್ಯಕ್ಷರಾಗಿ ಆಯ್ಕೆಯಾದ ಹರೀಶ್  ಕೆ. ಕಾರಿಂಜ ರವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

                                                                                                                                                                       ವರದಿ: ಬಿ. ರತ್ನಾಕರ್ ನಾವೂರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.