ಕರ್ನಾಟಕ ರಕ್ಷಣಾ ವೇದಿಕೆ: 2ನೇ ವರ್ಷದ ಕನ್ನಡ ಸಂಗಮ

ಉಜಿರೆ: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಮತ್ತು ಬೆಳ್ತಂಗಡಿ ತಾಲ್ಲೂಕು ಘಟಕದ ಆಶ್ರಯದಲ್ಲಿ ಆಯೋಜಿಸಲಾದ ಕನ್ನಡ ಸಂಗಮ ಕಾರ್ಯಕ್ರಮವು ನ.24 ರಂದು ಉಜಿರೆಯಲ್ಲಿ  ಜರುಗಿತು. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಬೆಂಗಳೂರಿನ ಟಿ.ಎ. ನಾರಾಯಣ ಗೌಡ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಖಂಡವಾದ ಸಮೃದ್ಧ ಕರ್ನಾಟಕ ರೂಪಿಸುವುದೇ ಕರ್ನಾಟಕ ರಕ್ಷಣಾ ವೇದಿಕೆಯ ಉದ್ದೇಶವಾಗಿದೆ. ಕನ್ನಡವನ್ನು ನಿತ್ಯವೂ ಬಳಸಿ ಉಳಿಸಬೇಕು. ಕನ್ನಡ ಸಂಗಮ ಕನ್ನಡಿಗರ ಸಂಭ್ರಮವಾಗಬೇಕು.  ಯುವ ಜನತೆ ಕನ್ನಡ ನಾಡು-ನುಡಿ-ಸಂಸ್ಕೃತಿ ಉಳಿಸಲು ಸಂಘಟಿತ ಪ್ರಯತ್ನ ಮಾಡಿ ತಾಯಿ ನಾಡಿನ ಋಣ ತೀರಿಸಬೇಕು ಎಂದು ನುಡಿದರು.
ಶ್ರೀನಿವಾಸ ಗೌಡ ಪಟ್ರಮೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಬಾಲಕೃಷ್ಣ ಅರಿಪಾಡಿತ್ತಾಯ, ರಾಮ ಪಿ. ಸಾಲ್ಯಾನ್, ಅಬ್ದುಲ್ ರಹಿಮಾನ್, ಸ್ನೇಕ್ ಜೋಯ್, ಗಣಿತ ಶಿಕ್ಷಕ ಯಾಕೂಬ್ ಮತ್ತು ಎಸ್.ಬಿ. ನರೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಶರತ್‌ಕೃಷ್ಣ ಪಡ್ವೆಟ್ನಾಯ ಶುಭಾಶಂಸನೆ ಮಾಡಿದರು. ಕರ್ನಾಟಕ ರಕ್ಷಣಾ ವೇದಿಕೆಯ ದ.ಕ. ಜಿಲ್ಲಾಧ್ಯಕ್ಷ ಅನಿಲ್‌ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳ್ತಂಗಡಿಯ ವಕೀಲ ನವಾಝ್ ಶರೀಫ್ ಸ್ವಾಗತಿಸಿ,  ಧರ್ಮೇಂದ್ರ ಧನ್ಯವಾದವಿತ್ತು, ಅಕ್ಷತಾ ಮತ್ತು ಶಂಸುದ್ದೀನ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.