ಬೆಳ್ತಂಗಡಿ: ತಾಲೂಕು ಪಂಚಾಯತ್ ವಿಶೇಷ ಸಭೆ

ಬೆಳ್ತಂಗಡಿ : ತಾಲೂಕು ಪಂಚಾಯತ್ ವಿಶೇಷ ಸಭೆಯು ತಾ.ಪಂ ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿಯವರ ಅಧ್ಯಕ್ಷತೆಯಲ್ಲಿ ನ.23 ರಂದು ತಾ.ಪಂ ಸಭಾಭವನದಲ್ಲಿ ಜರುಗಿತು.
ತಾ.ಪಂ ಉಪಾಧ್ಯಕ್ಷೆ ಶ್ರೀಮತಿ ವೇದಾವತಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿಯನ್, ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಸಹಾಯಕ ಲೆಕ್ಕಪರಿಶೋಧಕ ಗಣೇಶ್, ಸಂಯೋಜಕ ಜಯಾನಂದ ಹಾಗೂ ತಾ.ಪಂ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದ್ದರು.
ತಾಲೂಕು ಪಂಚಾಯತಿ ಕಛೇರಿಯ ನೂತನ ಸುಸಜ್ಜಿತ ಕಟ್ಟಡ ರೂ.3.50ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಸಭೆಯಲ್ಲಿ ಪ್ರಕಟಿಸಲಾಯಿತು. ಮುಂದಿನ 12 ತಿಂಗಳುಗಳೊಳಗೆ ಈಗ ಇರುವ ತಾ.ಪಂ ಹಳೆಕಟ್ಟಡವನ್ನು ಕೆಡವಿ, ಅದೇ ಜಾಗದಲ್ಲಿ ಮೂರು ಅಂತಸ್ತಿನ ಸುವ್ಯವಸ್ಥಿತ ಕಟ್ಟಡ ರಚನೆಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಈಗಾಗಲೇ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಹಂತದಲ್ಲಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ತಿಳಿಸಿದರು.
2018-19೯ನೇ ಸಾಲಿನ 1ಕೋಟಿ ರೂ. ಅನುದಾನಕ್ಕೆ ಕ್ರಿಯಾಯೋಜನೆಯಂತೆ ಕಾಮಗಾರಿಗಳ ಪಟ್ಟಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ತಾ.ಪಂ ವಿಶೇಷ ಘಟಕ ಯೋಜನೆಯಡಿಯಲ್ಲಿ ಪ.ಜಾತಿ ಕಾಲನಿಗಳ ಮೂಲಸೌಕರ್ಯಕ್ಕೆ 12.ಲಕ್ಷ ಗಿರಿಜನ ಉಪಯೋಜನೆಯಲ್ಲಿ ಪ.ಪಂ ಕಾಲೊನಿಗಳ ಮೂಲ ಸೌಕರ್ಯಕ್ಕೆ 7 ಲಕ್ಷ, ಎಸ್‌ಜಿಎಸ್‌ವೈ ಕಾಮಗಾರಿಗೆ 90 ಸಾವಿರ, ಅಭಿವೃದ್ಧಿ ಅನುದಾನವಾಗಿ2.98 ಲಕ್ಷ, ರಸ್ತೆ ಮತ್ತು ಸೇತುವೆಗೆ 5.98 ಲಕ್ಷ, ಅಧಿಭಾರ ಶುಲ್ಕವಾಗಿ 24,15,861  ಲಕ್ಷ, ಆರೋಗ್ಯ ಇಲಾಖೆ ಕಟ್ಟಡ ನಿರ್ವಹಣೆಗೆ 9.ಲಕ್ಷ, ಅಂಗನವಾಡಿ ಕಟ್ಟಡಗಳ ನಿರ್ವಹಣೆಗೆ 73.98 ಲಕ್ಷ, ಗ್ರಾಮೀಣ ನೀರು ಪೂರೈಕೆಗೆ 67 ಸಾವಿರ, ಶಿಕ್ಷಣ ಇಲಾಖೆ ಕಟ್ಟಡ ನಿರ್ವಹಣೆಗೆ 17 ಲಕ್ಷ ಅನುದಾನಕ್ಕೆ ಅನುಮೋದನೆ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.