ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪರಿಹಾರನಿಧಿ ವಿತರಣೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಳದಂಗಡಿ ವಲಯದ ಕುದ್ಯಾಡಿ ಒಕ್ಕೂಟದ ಬಿಂದು ಶ್ರೀ ಗುಂಪಿನ ಸದಸ್ಯೆ ಸುಜಯ ಅವರ ಪಿಲ್ಯ ಗ್ರಾಮದ ನಿನ್ನಿಕಲ್ಲು ಎಂಬಲ್ಲಿದ್ದ ಮನೆಯು ಕಳೆದ ಮಳೆಗಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಗೋಡೆ ಕುಸಿದು ನಷ್ಟ ಹೊಂದಿತ್ತು. ಅವರಿಗೆ ಯೋಜನೆಯಿಂದ ಪರಿಹಾರವಾಗಿ ದೊರೆತ ರೂ. 7000/ ನ್ನು ಗುರುವಾರ ಹಸ್ತಾಂತರಿಸಲಾಯಿತು.
ಈ ಸಂದರ್ಭ ವಲಯ ಮೇಲ್ವಿಚಾರಕಿ ಮಲ್ಲಿಕಾ, ವಲಯಾಧ್ಯಕ್ಷ ದೀಪಕ್ ಆಠವಳೆ, ಸೇವಾನಿರತೆ ಹರಿಣಾಕ್ಷಿ, ಮನೆಯ ಸುಜಾತ ಅವರ ಪತಿ ಸಂತೋಷ್ ಇದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.