ಬೆಳಾಲು : ಸಿಡಿಲು ಬಡಿದು ಮನೆಗೆ ಹಾನಿ

ಬೆಳಾಲು: ಇಲ್ಲಿಯ ಮುರತ್ತಪಲ್ಕೆ ನಿವಾಸಿ ದಯಾನಂದ ಗೌಡ ರವರ ಮನೆಗೆ ಸಿಡಿಲು ಬಡಿದು ಮನೆಯ ಗೋಡೆ ಬಿರುಕು ಬಿಟ್ಟಿದ್ದು , ಕೊಟ್ಟಿಗೆಯಲ್ಲಿದ್ದ ಕರುವೊಂದು ಸಿಡಿಲಿನ ಆಘಾತಕ್ಕೆ ಮೃತಪಟ್ಟ ಘಟನೆ ನ.18 ರಂದು ರಾತ್ರಿ ನಡೆದಿದೆ.
ಘಟನೆಯಿಂದ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಸಂಪೂರ್ಣವಾಗಿ ಸುಟ್ಟುಹೋಗಿದೆ ಹಾಗೂ ಮನೆಯ ಹಿಂಬದಿಯ ಮಣ್ಣು ಕುಸಿದು ಅಪಾರ ನಷ್ಟವುಂಟಾಗಿದೆ. ಮನೆಯ ಸದಸ್ಯರು ಮನೆಯ ಮುಂಬಾಗದಲ್ಲಿದ್ದ ಕಾರಣ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.