ಕಕ್ಕಿಂಜೆ ಶಾಖೆ: ಸಹಕಾರ ಸಪ್ತಾಹ ಕಾರ್ಯಕ್ರಮ

ಕಕ್ಕಿಂಜೆ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಗದ ಎಲ್ಲಾ ಶಾಕೆಯಲ್ಲಿ 65 ನೇ ಸಹಕಾರಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನ.18 ರಂದು ಕಕ್ಕಿಂಜೆ ಶಾಖೆಯಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ನಿದೇಶಕ ಅಶೋಕ್ ಕುಮಾರ್ ಜೈನ್ ವಹಿಸಿ ಮಾತನಾಡುತ್ತಾ ಸಂಘದ ಸದಸ್ಯರಿಗೆ ಸದಾ ಸ್ಪಂದಿಸುತ್ತದೆ ಎಂದು ಹೇಳಿ ಶುಭ ಹಾರೈಸಿದರು.
ಆಥಿತಿಗಳಾಗಿ ನಿವೃತ್ತ ಶಿಕ್ಷಕ ಗಜಾನನವರು ನಮ್ಮ ನೆಲ, ಜಲ ಹಾಗೂ ಪರಿಸರಗಳನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಕ್ಯಾಂಪ್ಕೋ ವತಿಯಿಂದ ಅರ್ಹ 18 ವರ್ಷದಿಂದ 35 ವರ್ಷದ ವಯೋಮಾನದವರಿಗೆ ಅಡಿಕೆ ಮದ್ದು ಸಿಂಪಡನೆ, ಮರ ಏರುವ ಬಗ್ಗೆ ಹಾಗೂ ಕೃಷಿ ಮಾಹಿತಿ ಕಾರ್ಯಗಾರ 5 ದಿನ ವಿಟ್ಲದಲ್ಲಿ ನಡೆಯುವ ಬಗ್ಗೆ ವಿವರಿಸಿದರು.
ಸಂಘದ ಅಧ್ಯಕ್ಷ ಎನ್.ಎಸ್ ಗೋಖಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಮನುಷ್ಯ ಬಾಳು, ಹುಟ್ಟು ಸಾವಿನ ಮಧ್ಯೆ ಮೂರು ದಿನದ ಬಾಳು. ಸಾಲಮನ್ನಾದ ವಿಚಾರದಲ್ಲಿ ಸಂಗದ ಸಿಬ್ಬಂದಿ ವರ್ಗದವರು ಪಡುವ ಕಷ್ಟವನ್ನು ಇಲ್ಲಿ ಸ್ಮರಿಸಬೇಕಾಗುತ್ತದೆ. ರೈತರು ಕೃಷಿ ವಿಚಾರದಲ್ಲಿ ಪಡುವ ಕಷ್ಟ ಅಷ್ಟಿಷ್ಟಲ್ಲ. ರೈತರ ಸಂಕಷ್ಟದಲ್ಲಿ ಸಂಘ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ವೇದಿಕೆಯಲ್ಲಿ ನಿರ್ದೇಶಕರಾದ ಚಂದ್ರಮೋಹನ್ ಗೋಖಲೆ, ಲಿಂಗಪ್ಪ ಗೌಡ, ಮಿನಿಬೇಬಿ, ರೈತ ಸೇವಾ ಕೂಟದ ಅಧ್ಯಕ್ಷ ಅಬ್ದುಲ್ ರಹ್ಮಾನ್ ದಡ್ಡು, ಗ್ರಾ.ಪಂ ಸದಸ್ಯ ಓಬಯ್ಯ ಗೌಡ ಉಪಸ್ಥಿತರಿದ್ದರು. ಸಂಘದ ಮಾಜಿ ನಿರ್ದೇಶಕರಾದ ಅನಂತ್ ರಾವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಕ್ಕಿಂಜೆ ಶಾಖಾ ವ್ಯವಸ್ಥಾಪಕ ಕರುಣಾಕರ ಗೌಡ ವಂದಿಸಿದರು. ಸುಚಿತ್ರಾ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ನವೋದಯ ಮೇಲ್ವಿಚಾರಕ ಉಮೇಶ್ ಆಚಾರ್, ನವೋದಯ ಸ್ವಸಹಾಯ ಸಂಘದ ಸದಸ್ಯರು, ಸಹಕಾರಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.