ಮುಂಡಾಜೆಯಲ್ಲಿ ಸ್ವಚ್ಛತಾ ಅಭಿಯಾನ ತಾಲೂಕು ಮಟ್ಟದ ಜಾಥ

ಮುಂಡಾಜೆ: ವಿಶ್ವ ಶೌಚಾಲಯ ದಿನಾಚರಣೆಯ ಅಂಗವಾಗಿ ತಾಲೂಕು ಪಂಚಾಯತ್ ವತಿಯಿಂದ ಹಮ್ಮಿಕೊಳ್ಳಲಾದ ಸ್ವಚ್ಛತಾ ಅಭಿಯಾನ ತಾಲೂಕು ಮಟ್ಟದ ಬೃಹತ್ ಜಾಥಾ ವನ್ನು ನ.19 ರಂದು ಜಿ.ಪಂ ಉಜಿರೆ ಸದಸ್ಯೆ ನಮಿತಾ.ಕೆ.ಪೂಜಾರಿ ಉದ್ಘಾಟಿಸಿದರು

ಸ್ವಚ್ಛತಾ ಅಭಿಯಾನ ಜಾಥಾ ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಮುಂಭಾಗದ ಮೈದಾನದಿಂದ ಹೊರಟು, ಸೋಮಂತಡ್ಕ ಪೇಟೆಯ ಮೂಲಕ ಸಾಗಿ, ಮುಂಡಾಜೆ ಗ್ರಾಮ ಪಂಚಾಯತ್ ಕಛೇರಿ ಸಭಾಭವನದವರೆಗೆ ಸಾಗಿತು.
ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ, ಸ್ಥಾಯಿಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿಯನ್, ತಾ.ಪಂ ಸದಸ್ಯೆ ಶ್ರೀಮತಿ ಲೀಲಾವತಿ, ತಾ.ಪಂ.ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಯಂಗ್ ಚಾಲೆಂಜರ್‍ಸ್ ಸ್ಪೋರ್ಟ್ಸ್ ಕ್ಲಬ್ ಸಂಚಾಲಕ ನಾಮದೇವ ರಾವ್, ಮುಂಡಾಜೆ ಗ್ರಾ.ಪಂ ಅಧ್ಯಕ್ಷೆ ಶಾಲಿನಿ ವಿಜಯಕುಮಾರ್, ಉಪಾಧ್ಯಕ್ಷೆ ವಸಂತಿ ರಾಜ್‌ಗೋಪಾಲ್, ಗ್ರಾ.ಪಂ ಕಾರ್ಯದರ್ಶಿ ಸಂಜೀವ ನಾಯ್ಕ, ಗ್ರಾ.ಪಂ ಸದಸ್ಯರುಗಳಾದ ನಾರಾಯಣ ಗೌಡ ದೇವಸ್ಯ, ಚೆನ್ನಕೇಶವ ನಾಯ್ಕ, ಸುರೇಶ್ ಹೆಗ್ಡೆ, ಗಣೇಶ್ ಬಂಗೇರ, ಅಶ್ವಿನಿ.ಕೆ ಹೆಬ್ಬಾರ್, ಚಂದ್ರಾವತಿ ಉಮೇಶ್, ಸುಮನಾ ಗೋಖಲೆ, ಮುಂಡಾಜೆ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ, ಮುಂಡಾಜೆ ಸಹಕಾರಿ ಸಂಘದ ಅಧ್ಯಕ್ಷ ಎನ್.ಎಸ್ ಗೋಖಲೆ, ಮುಂಡಾಜೆ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸೀದಿ ಸ್ಥಾಪಕಾಧ್ಯಕ್ಷ ಲ| ಅಶ್ರಫ್ ಅಲಿಕುಂಞಿ, ಗ್ರಾ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮುಂಡ್ರುಪ್ಪಾಡಿ, ರೋಟರಿ ಕ್ಲಬ್ ಸದಸ್ಯ ಬಾಬು ಪೂಜಾರಿ, ಗ್ರಾಮಾಭಿವೃದ್ಧಿ ಯೋಜನೆ ಚಾರ್ಮಾಡಿವಲಯ ಮೇಲ್ವಿಚಾರಕ ರವಿಕುಮಾರ್, ಸೇವಾ ಪ್ರತಿನಿಧಿ ಸರಿತಾ,  ಮತ್ತಿತರರು ಉಪಸ್ಥಿತರಿದ್ದರು.  ಜಯಾನಂದ ಲಾಯಿಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.