ಗುರುವಾಯನಕೆರೆ ಶ್ರೀ ವೇದವ್ಯಾಸ ಶಿಶುಮಂದಿರದ ಲೋಕಾರ್ಪಣೆ

Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ: ಇಲ್ಲಿಯ ಹವ್ಯಕ ಭವನದ ಬಳಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಸೇವಾ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ಅಷ್ಟಭುಜಾಕೃತಿಯ ಶ್ರೀ ವೇದವ್ಯಾಸ ಶಿಶುಮಂದಿರದ ಲೋಕಾರ್ಪಣೆ ಸಮಾರಂಭವು ನ.18 ರಂದು ಜರುಗಿತು.
ಸಮಾರಂಭದಲ್ಲಿ ಮಂಗಳೂರು ಮಂಗಳಾದೇವಿ ಶ್ರೀ ರಾಮಕೃಷ್ಣ ಬಾಲಕಾಶ್ರಮದ ಸ್ವಾಮೀಜಿಗಳಾದ ಶ್ರೀ ಸ್ವಾಮಿ ಧರ್ಮವ್ರತಾನಂದ ಆಶೀರ್ವಚನ ನೀಡಿದರು. ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಪ್ರಭಾಕರ ಭಟ್ ಕಲ್ಲಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್, ತಾ.ಪಂ ಸದಸ್ಯ ಗೋಪೀನಾಥ ನಾಯಕ್, ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ. ವಿಠಲ ಭಟ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಮಾತೃಮಂಡಳಿ ಅಧ್ಯಕ್ಷೆ ರಕ್ಷಿತಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿಶುಮಂದಿರಕ್ಕೆ ೪೦ ಸೆಂಟ್ಸ್ ಜಾಗವನ್ನು ದಾನವಾಗಿ ನೀಡಿದ ದಿ| ವಾಮನ ನಾಯಕ್‌ರವರ ಪುತ್ರ ಗೋಪಿನಾಥ ನಾಯಕ್, ಟ್ರಸ್ಟ್ ಅಧ್ಯಕ್ಷ ಬಿ. ವಿಠಲ ಭಟ್, ಶಿಶುಮಂದಿರ ಏಳಿಗೆಯಲ್ಲಿ ಸಹಕರಿಸಿದ ಪದ್ಮಿಣಿ ನಾಯರ್, ಎಂ.ಜಿ ಗಣೇಶ್, ರಾಜಗೋಪಾಲ ಭಟ್ -ಜಯಶ್ರೀ ದಂಪತಿ, ಪುರುಷೋತ್ತಮ, ಆನಂದ ಕೋಟ್ಯಾನ್, ರಚನಾ ಕಾಶಿನಾಥ್, ಸುಧಾಮಣಿ, ಸುಜಾತಾ ಮಾತಾಜಿ, ಪೂರ್ಣಿಮಾ ಮಾತಾಜಿ ಇವರುಗಳನ್ನು ಸನ್ಮಾನಿಸಲಾಯಿತು.
ಶಿಶುಮಂದಿರ ಸಮಿತಿ ಅಧ್ಯಕ್ಷ ರಚನಾ ಕಾಶೀನಾಥ್ ಸ್ವಾಗತಿಸಿ, ಸಲಹೆಗಾರ ರಾಜಗೋಪಾಲ್ ಭಟ್ ಪ್ರಸ್ತಾವಿಸಿ, ಉಪಾಧ್ಯಕ್ಷೆ ಇಂದುಮತಿ ವಂದಿಸಿದರು. ಕಾರ್ಯದರ್ಶಿ ಸುಧಾಮಣಿ ಹಾಗೂ ಶಿಕ್ಷಕಿ ಮಂಗಳಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.