ಧರ್ಮಸ್ಥಳದಲ್ಲಿ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ: ವೆಬ್‌ಸೈಟ್‌ಗೆ ಚಾಲನೆ

ಧರ್ಮಸ್ಥಳ: ಶ್ರವಣಬೆಳಗೊಳದದಲ್ಲಿ ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀಪಾಲ್ ಗಂಗ್ವಾಲ್ ಧರ್ಮಸ್ಥಳದಲ್ಲಿ 2019 ರ ಫೆಬ್ರವರಿ 9 ರಿಂದ 18ರ ವರೆಗೆ ನಡೆಯಲಿರುವ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ವೆಬ್‌ಸೈಟ್‌ಗೆ ನ.18 ರಂದು ಚಾಲನೆ ನೀಡಿ ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ , ಹೇಮಾವತಿ ವಿ. ಹೆಗ್ಗಡೆ, ಪ್ರಧಾನ ಸಂಚಾಲಕ ಡಿ. ಸುರೇಂದ್ರ ಕುಮಾರ್, ಸಂಚಾಲಕರಾದ ಡಿ. ಹರ್ಷೇಂದ್ರ ಕುಮಾರ್, ವಿಮುಕ್ತಿ ಜೈನ್, ವಿವೇಕ್ ಜೈನ್, ವಿಕಾಸ್ ಜೈನ್, ಎ.ವಿ. ಶೆಟ್ಟಿ, ಅಭಿಜಿತ್ ಜೈನ್, ಪೂರಣ್ ವರ್ಮ, ಪ್ರಸನ್ನ ಕುಮಾರ್, ದಿವ ಕೊಕ್ಕಡ ಮತ್ತು ಪ್ರೊ. ಎಸ್. ಭಾಸ್ಕರ ಹೆಗಡೆ ಉಪಸ್ಥಿತರಿದ್ದರು.

ವೆಬ್‌ಸೈಟ್: www.bahubali.live
ಇದರಲ್ಲಿ ಮಸ್ತಕಾಭಿಷೇಕದ ಸವಿವರ ಮಾಹಿತಿ ಲಭ್ಯವಿದೆ. ಅಲ್ಲದೆ ಧರ್ಮಸ್ಥಳದಲ್ಲಿ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಇತರ ಎಲ್ಲಾ ಮಾಹಿತಿ ಲಭ್ಯವಿದೆ. ಕಾಲಕಾಲಕ್ಕೆ ಸುದ್ದಿಯನ್ನು ಇದರಲ್ಲಿ ಅಳವಡಿಸಲಾಗುವುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.