‘ವಿಷ್ಣುಪದ’ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ಬಡಗಕಾರಂದೂರು: ಅಪರಕರ್ಮಾಂಗಗಳನ್ನು ನೆರವೇರಿಸುವ ಉದ್ದೇಶದಿಂದ ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸನಿಹ ಹರಿಯುತ್ತಿರುವ ಫಲ್ಗುಣಿ ನದಿ ತಟದಲ್ಲಿ ನಿರ್ಮಿಸಲಾದ ವಿಷ್ಣುಪದ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ನ. 17 ರಂದು ಜರುಗಿತು.
ದೇವಳದ ತಂತ್ರಿಗಳಾದ ಸೀತಾರಾಮ ಹೆಬ್ಬಾರ್ ಕಾಜಿಮುಗೇರು ಇವರು ದೀಪ ಬೆಳಗಿಸಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಪುರೋಹಿತ ಪದ್ಮನಾಭ ಜೋಶಿ ಅವರು ಗಣಹವನವನ್ನು ನೆರವೇರಿಸಿದರು.
ವ್ಯಕ್ತಿಯ ಮರಣಾನಂತರ ಮುಂದಿನ ಸದ್ಗತಿ ಬಗ್ಗೆ ಮಾಡುವ ಔರ್ಧ್ವ ದೈಹಿಕ ಉತ್ತರ ಕ್ರಿಯಾದಿಗಳನ್ನು ನೆರವೇರಿಸಲು ಇಲ್ಲಿನ ಪರಿಸರದಲ್ಲಿ ಸೂಕ್ತವಾದ ಜಾಗದ ಕೊರತೆ ಇತ್ತು. ಗೋಕರ್ಣ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ದರ್ಭೆತಡ್ಕ ಮೊದಲಾದ ದೂರದೂರುಗಳಿಗೆ ಹೋಗಿ ಮಾಡಬೇಕಾಗಿ ಬರುತ್ತಿತ್ತು. ಇದೀಗ ಆ ತೊಂದರೆ ನಿವಾರಣೆಯಾಗಿದ್ದು ಫಲ್ಗುಣಿ ತಟಾಕದ ಪ್ರಶಾಂತವಾದ ಸ್ಥಳದಲ್ಲಿ ದಾನಿಗಳ ನೆರವಿನಿಂದ ಸಕಲಸೌಲಭ್ಯದಿಂದ ಕೂಡಿದ ಸುಸಜ್ಜಿತವಾದ ವಿಷ್ಣುಪದ ನಿರ್ಮಿಸಲಾಗಿದೆ. ಹಿಂದೂ ಬಾಂಧವರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ದೇವಳದ ಆಡಳಿತೆ ಮೊಕ್ತೇಸರ ಸದಾನಂದ ಸಹಸ್ರಬುದ್ಧೆ ತಿಳಿಸಿದರು.
ಈ ಸಂದರ್ಭ ಸಹ ಮೊಕ್ತೇಸರರಾದ ಪ್ರಕಾಶ್ ಜೋಶಿ, ಚಂದ್ರಕಾಂತ ಗೋರೆ, ಪುರುಷೋತ್ತಮ ತಾಮ್ಹನ್‌ಕಾರ್, ಅರ್ಚಕ ವೆಂಕಟೇಶ ಗೋಖಲೆ, ಗಣ್ಯರಾದ ಪ್ರಭಾಕರ ಆಠವಳೆ, ಸದಾಶಿವ ಆಠವಳೆ, ಶ್ರೀಕಂಠ ಮೆಹೆಂದಳೆ, ಮುರಲೀಧರ ಗೋಖಲೆ, ಪ್ರವೀಣಚಂದ್ರ ಮೆಹೆಂದಳೆ, ಅಮರೇಶ ಜೋಶಿ, ದಿನೇಶ್ ಅಭ್ಯಂಕಾರ್, ಶ್ರೀಕಾಂತ ಪಟವರ್ಧನ್, ಜಯರಾಮ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.