ಮರೋಡಿ: ಮುಕ್ತ ಕಬಡ್ಡಿ ಪಂದ್ಯಾಟ

Advt_NewsUnder_1
Advt_NewsUnder_1
Advt_NewsUnder_1

ಮರೋಡಿ:  ದೀಪಾವಳಿ ಪ್ರಯುಕ್ತ ಮರೋಡಿ ಅರುಣೋದಯ ಯುವಕ ಮಂಡಲ ಆಯೋಜಿಸಿದ್ದ ಪ್ರೊ ಕಬಡ್ಡಿ ಮಾದರಿಯ ಹೊನಲು ಬೆಳಕಿನ 58 ಕೆ.ಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟವು ಇತ್ತೀಚೆಗೆ ಜರುಗಿತು.

ಶಾಸಕ ಹರೀಶ್‌ ಪೂಂಜ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ‘ಯುವಕ ಮಂಡಲಗಳು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅರುಣೋದಯ ಯುವಕ ಮಂಡಲ ತಾಲ್ಲೂಕಿಗೆ ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ಮಂಡಲದ ಅಧ್ಯಕ್ಷ ಬಾಲಕೃಷ್ಣ ಬಂಗೇರ ವಹಿಸಿದ್ದರು. ಮಂಗಳೂರು ಮಾಸ್ಟರ್ ಪ್ಲವರ್ ಮಾಲೀಕ ಪಕೀರಬ್ಬ ಎಂ, ಶಿರ್ತಾಡಿ ಪ್ರಭಾ ಕ್ಲಿನಿಕ್‍ನ ಡಾ.ಆಶೀರ್ವಾದ್, ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ಶೆಟ್ಟಿ, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾ ಅಧಿಕಾರಿ ಪ್ರಭಾಕರ ನಾರಾವಿ, ಯುವ ಉದ್ಯಮಿ ಅಶ್ವಥ್ ಹೆಗ್ಡೆ ಬಳಂಜ, ಪಲರಗೋಳಿ ಆದಿಶಕ್ತಿ ಸೇವಾ ಸಮಿತಿ ಅಧ್ಯಕ್ಷ ರತ್ನಾಕರ ಬುಣ್ಣನ್ ಮರೋಡಿ, ಉದ್ಯಮಿಗಳಾದ ಸಂತೋಷ್ ಶೇರಿಗಾರ್ ಶಿರ್ತಾಡಿ, ಶಶಿಧರ ಶೆಟ್ಟಿ ಕಲ್ಲಾಪು, ವಿದ್ಯಾನಂದ ಪೂಜಾರಿ ಮರೋಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪ ಪೂಜಾರಿ, ರಾಜವರ್ಮ ಜೈನ್ ನಾರಾವಿ, ಉದಯ ಹೆಗ್ಡೆ ನಾರಾವಿ, ಗುರುಪ್ರಸಾದ್ ನಾರಾವಿ ಉಪಸ್ಥಿತರಿದ್ದರು. ಶಾಸಕ ಹರೀಶ್ ಪೂಂಜ ಅವರನ್ನು ಅರುಣೋದಯ ಯುವಕ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.

58 ಕೆ.ಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಶಾರದಾಂಬ ಮರೋಡಿ ಪ್ರಥಮ ಬಹುಮಾನ ಪಡೆಯಿತು. ಶಿವಾಜಿ ನೆಲ್ಲಿಂಗೇರಿ ದ್ವಿತೀಯ, ದುರ್ಗಾಂಬ ಫೆಂಡ್ಸ್‌ ತೃತೀಯ ಮತ್ತು ವೈ.ಎಫ್‌.ಸಿ. ಮುಂಡಾಜೆ ಚತುರ್ಥ ಬಹುಮಾನವನ್ನು ತನ್ನದಾಗಿಸಿಕೊಂಡಿತು.

ಮಂಡಲದ ಗೌರವಾಧ್ಯಕ್ಷ ಜಯಂತ್ ಕೋಟ್ಯಾನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಯಶೋಧರ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ನವೀನ್ ಕೋಟ್ಯಾನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.