ಕೊಕ್ಕಡ: ಸಹಕಾರ ಸಪ್ತಾಹ ಕಾರ್ಯಕ್ರಮ

ಕೊಕ್ಕಡ: 65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನ.14 ರಂದು ಸಂಘದ ಅಧ್ಯಕ್ಷ ನಾರಾಯಣ ಗೌಡ ರವರು ಧ್ವಜಾರೋಹಣ ಮಾಡುವ ಮೂಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಭಾgತ ಗ್ರಾಮಗಳಿಂದ ಕೂಡಿದ ದೇಶ. ಗ್ರಾಮೀಣ ಬದುಕಿನ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಸಹಕಾರ ಸಪ್ತಾಹದ ಧ್ಯೇಯ ಮತ್ತು ವಿಚಾರಗಳನ್ನು ತಮ್ಮ ಸಹಕಾರ ಸಂಘಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಇದು ಅರ್ಥಪೂರ್ಣವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಶಬರಾಯ, ನಿರ್ದೇಶಕರುಗಳಾದ ರಾಮಣ್ಣ ಗೌಡ, ಶ್ರೀಮತಿ ಸರೋಜಾ, ಶ್ರೀಮತಿ ಸೀತಮ್ಮ, ಶ್ರೀಮತಿ ಭವಾನಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಭುವನೇಶ್ವರಿ, ಸಿಬ್ಬಂದಿ ವರ್ಗ ಹಾಗೂ ಸದಸ್ಯರು ಪಾಲ್ಗೊಂಡಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.