ಅನಂತ್ ಕುಮಾರ್ ಹೆಸರಿನಲ್ಲಿ ಕ್ಯಾನ್ಸರ್ ಸಂಶೋಧನಾ ಕೇಂದ್ರ ತೆರೆಯುವಂತೆ ಪ್ರಧಾನಿಗೆ ಶಾಸಕರಿಂದ ಮನವಿ

ಬೆಳ್ತಂಗಡಿ : ಇತ್ತೀಚಿಗೆ ನಿಧನರಾದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಸರಿನಲ್ಲಿ ಕ್ಯಾನ್ಸರ್ ಸಂಶೋಧನಾ ಕೇಂದ್ರ ತೆರೆಯುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಟ್ವಿಟ್ಟರ್ ಮೂಲಕ   ಶಾಸಕ ಹರೀಶ್ ಪೂಂಜ ಮನವಿ ಮಾಡಿದ್ದಾರೆ.
ಕ್ಯಾನ್ಸರ್ ಎಂಬ ಮಹಮಾರಿ ಈಗಾಗಲೇ ಹಲವು ಜೀವಗಳನ್ನು ಬಲಿ ಪಡೆದುಕೊಂಡಿದೆ. ಇದೀಗ ನಾವುಅನಂತ್ ಕುಮಾರ್ ಅವರನ್ನು ಕಳೆದುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಅನಂತ್ ಕುಮಾರ್ ಅವರ ಹೆಸರಿನಲ್ಲಿ ಕ್ಯಾನ್ಸರ್ ಸಂಶೋಧನಾ ಕೇಂದ್ರ ತೆರೆಯಬೇಕು ಎಂದು ವಿನಂತಿಸಿದ್ದಾರೆ.

ಬೇರೆ ಬೇರೆ ವಿಧದ ಕ್ಯಾನ್ಸರ್ ಇವತ್ತು ಮಾರಕವಾಗಿ ಇಡೀ ದೇಶ ಹಾಗೂ ವಿಶ್ವ ವ್ಯಾಪ್ತಿಯಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ನಿಧನರಾದ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಹೆಸರಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರು ಕ್ಯಾನ್ಸರ್ ಸಂಶೋಧನಾ ಕೇಂದ್ರವನ್ನು ತೆರೆದು, ಸಂಶೋಧನೆ ಮೂಲಕ ವಿವಿಧ ಕ್ಯಾನ್ಸರ್ ರೋಗಗಳಿಗೆ ಚಿಕಿತ್ಸೆಯನ್ನು ಪತ್ತೆ ಹಚ್ಚಿ ಅವರನ್ನು ಗುಣಮುಖರನ್ನಾಗಿ ಮಾಡಿದರೆ ಸಮಸ್ತ ನಾಡಿಗೆ ಅನುಕೂಲ ವಾಗುತ್ತದೆ. ಆ ಮೂಲಕ ಅನಂತ್ ಕುಮಾರ್ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ ಮತ್ತು ಅವರ ಹೆಸರಿನಲ್ಲಿ ಅದೆಷ್ಟೋ ಜೀವಗಳನ್ನು ಉಳಿಸಬಹುದು.
ಶಾಸಕ ಹರೀಶ್ ಪೂಂಜ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.